Sunday, July 7, 2024
Homeಟಾಪ್ ನ್ಯೂಸ್PM MODI : : ಭಗವಂತನ ರೂಪ ದರ್ಶನಕ್ಕೆ.. ಪ್ರದರ್ಶನಕ್ಕಲ್ಲ.. ರಾಗಾಗೆ ಮೋದಿ ತಿರುಗೇಟು!

PM MODI : : ಭಗವಂತನ ರೂಪ ದರ್ಶನಕ್ಕೆ.. ಪ್ರದರ್ಶನಕ್ಕಲ್ಲ.. ರಾಗಾಗೆ ಮೋದಿ ತಿರುಗೇಟು!

ನವದೆಹಲಿ : ತಮ್ಮ ರಾಜಕಾರಣದ ಸ್ವಾರ್ಥಕ್ಕಾಗಿ ರಾಹುಲ್ ಗಾಂಧಿಯವರು ಈಶ್ವರನ ಫೋಟೋವನ್ನು ಸಂಸತ್ಗೆ ತಂದು ಹಿಂದೂಗಳ ಕುರಿತು ನೀಡಿದ್ದ ಹೇಳಿಕೆ ಖಂಡನಾರ್ಹ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿರುಗೇಟು ನೀಡಿದರು.

ಇಂದು ನಡೆದ ಸಂಸತ್ ಕಲಾಪದಲ್ಲಿ ಈ ಬಗ್ಗೆ ಉಲ್ಲೇಖಿಸಿದ ಮೋದಿ, ಭಗವಂತನ ರೂಪ ಕೇವಲ ದರ್ಶನಕ್ಕೆ ಇರುವುದು…ಪ್ರದರ್ಶನಕ್ಕೆ ಅಲ್ಲ. ಈ ವಿಚಾರವನ್ನು ನಾವೆಲ್ಲರೂ ಚಿಕ್ಕವರಿಂದಲೂ ನೋಡುತ್ತಾ ಬಂದಿರುವುದಾಗಿ ವಿಪಕ್ಷ ವಿರುದ್ಧ ಪ್ರಧಾನಿ ವಾಗ್ದಾಳಿ ನಡೆಸಿದರು. ಈಶ್ವರನ ರೂಪ ಸ್ವಾರ್ಥ ಹಾಗೂ ಪ್ರದರ್ಶನಕ್ಕೆ ಬಳಸಬಾರದು. ನಿನ್ನೆ ಕಲಾಪದಲ್ಲಿ ರಾಹುಲ್ ಗಾಂಧಿ ಈಶ್ವರನ ಫೋಟೋ ಪ್ರದರ್ಶನ ಮಾಡಿದ್ದನ್ನು ಹಿಂದೂ ಸಮಾಜ ನೋಡಿ ಯೋಚಿಸುತ್ತಿದೆ ಎಂದು ಕುಟುಕಿದರು.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ, ಆರ್ಎಸ್ಎಸ್ನವರು ಮಾತ್ರ ಇಡೀ ಹಿಂದೂ ಸಮುದಾಯವಲ್ಲ ಎಂದು ನಿನ್ನೆ ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದರು. ಆ ವೇಳೆ ಸಂಸತ್ನಲ್ಲಿ ಶಿವನ ಫೋಟೋವನ್ನೂ ರಾಹುಲ್ ಪ್ರದರ್ಶಿಸಿದ್ದರು.

ಹೆಚ್ಚಿನ ಸುದ್ದಿ