Sunday, July 7, 2024
Homeಟಾಪ್ ನ್ಯೂಸ್MODI V/S RAHUL : ನೀನಾ..? ನಾನಾ..? ಜನ ಯಾರ ಮಾತು ಕೇಳ್ತಿದ್ದಾರೆ ನೋಡಿ ಎಂದ...

MODI V/S RAHUL : ನೀನಾ..? ನಾನಾ..? ಜನ ಯಾರ ಮಾತು ಕೇಳ್ತಿದ್ದಾರೆ ನೋಡಿ ಎಂದ ಕಾಂಗ್ರೆಸ್

ಹೊಸದಿಲ್ಲಿ: ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಮಧ್ಯೆ ನಡೆಯುತ್ತಿರುವ ವಾಕ್ಸಮರ ವ್ಯಾಪಕವಾಗಿ ಜನಮನ ಸೆಳೆಯುತ್ತಿದೆ. ರಾಹುಲ್‌ ಮಾತಿನಲ್ಲಿ ಸತ್ಯಾಂಶ ಇದೆ ಎಂದು ನಿಧಾನವಾಗಿ ಜನ ಅವರ ಚಿಂತನೆಗಳತ್ತ ಆಸಕ್ತಿ ತಾಳುತ್ತಿರುವಂತೆ ಕಾಣುತ್ತಿದೆ.

ಸಾಮಾಜಿಕ ಮಾಧ್ಯಮಗಳ ಮೂಲಕ ರಾಹುಲ್‌ ಅವರ ಚರಿಶ್ಮಾವನ್ನು ಹಂತ ಹಂತವಾಗಿ ಸಂಘಟಿತವಾಗಿ ನಾಶಗೊಳಿಸುತ್ತ ಪಪ್ಪು ಎಂದು ಗೇಲಿ ಮಾಡುತ್ತ ತಾನು ವಿಶ್ವ ಗುರುವೆಂದು ಬಿಂಬಿಸಿಕೊಂಡು ಬಂದಿರುವ ಮೋದಿಯವರು ರಾಹುಲ್‌ ವಾಗ್ದಾಳಿಗೆ ತತ್ತರಿಸುತ್ತಿದ್ದಾರೆ ಎಂಬುದು ಕಾಂಗ್ರೆಸ್ಸಿಗರ ವಾದ.

ರಾಹುಲ್‌ ಅವರ ಬಾಷಣದ ವೇಳೆ ಮೈಕ್‌ ಬಂದ್‌ ಮಾಡುವ, ಅವರ ಮಾತುಗಳನ್ನು ತಿರುಚಿ ಪ್ರಚಾರ ಮಾಡುವ ಅಗ್ಗದ ಗಿಮಿಕ್‌ಗಳು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸುತ್ತಲೇ ಇದ್ದಾರೆ.

ವಿಶೇಷ ಅಂದ್ರೆ ಸಾಮಾಜಿಕ ಮಾಧ್ಯಮಗಳಲ್ಲಿ ರಾಹುಲ್‌ ಗಾಂಧಿ ಭಾಷಣದ ವೀಡಿಯೊಗಳು ಲಕ್ಷಗಟ್ಟಲೆ ವ್ಯೂವ್ಸ್‌ ಹೊಂದಿದ್ದರೆ ಮೋದಿಯವರ ಭಾಷಣದ ವೀಡಿಯೊಗಳು ಸಾವಿರಗಳಷ್ಟು ವ್ಯೂವ್ಸ್‌ ಪಡೆಯುತ್ತಿದೆ.

ರಾಹುಲ್‌ ಅವರ ಭಾಷಣಕ್ಕೆ 8 ಲಕ್ಷ ವೈವ್ಸ್‌ ಮತ್ತು 24 ಸಾವಿರ ಲೈಕ್ಸ್‌ ಬಂದಿದ್ದರೆ ಪ್ರಧಾನಿ ಮೋದಿಯವರ ಭಾಷಣಕ್ಕೆ 72 ಸಾವಿರ ವ್ಯೂವ್ಸ್‌ ಮತ್ತು 1200 ಲೈಕ್ಸ್‌ ಬಂದಿರುವುದು ಸದ್ಯದ ರಾಜಕೀಯ ಸ್ಥಿತಿಗತಿ ಮತ್ತು ಜನರು ಭ್ರಮಾಲೋಕದಿಂದ ಪ್ರಜ್ಞಾವಸ್ಥೆಗೆ ವಾಲುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಕಾಂಗ್ರೆಸ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದೆ

ದೇಶವು ಸತ್ಯ ಕೇಳಲು ಬಯಸುತ್ತಿದೆ ಎನ್ನುವ ರಾಹುಲ್‌ ಅವರ ಮಾತಿಗೆ ಜನ ಕೇಳುತ್ತಾರೆಯೇ ಹೊರತು ಜುಮ್ಲಾಗಳು ಅಂದ್ರೆ ಹಗರಣಗಳ ಜನಕರನ್ನಲ್ಲ ಎಂದು ಕಾಂಗ್ರೆಸ್ ಕುಟುಕಿದೆ.

ಹೆಚ್ಚಿನ ಸುದ್ದಿ