Sunday, July 7, 2024
HomeದೇಶPM Modi: ನಾನು ಮೂರನೇ ಬಾರಿ ಪ್ರಧಾನಿಯಾಗಿರುವುದು ಕಾಂಗ್ರೆಸ್‌ ಉರಿಗೆ ಕಾರಣ - ಪ್ರಧಾನಿ ಮೋದಿ

PM Modi: ನಾನು ಮೂರನೇ ಬಾರಿ ಪ್ರಧಾನಿಯಾಗಿರುವುದು ಕಾಂಗ್ರೆಸ್‌ ಉರಿಗೆ ಕಾರಣ – ಪ್ರಧಾನಿ ಮೋದಿ

ನವದೆಹಲಿ: ಗಾಂಧಿ ಪರಿವಾರ ಹೊರತು ಪಡಿಸಿ ಬೇರೆಯವರು ಮೂರನೆ ಬಾರಿ ಪ್ರಧಾನಿಯಾಗುತ್ತಿರುವುದು ಕಾಂಗ್ರೆಸ್‌ ಪಕ್ಷಕ್ಕೆ ಸಹಿಸಿಕೊಳ್ಳಲಾಗುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇದುವರೆಗೂ ಭಾರತದಲ್ಲಿ ಕೇವಲ ಜವಾಹರ್‌ ಲಾಲ್‌ ನೆಹರೂ ಮಾತ್ರ ಮೂರು ಬಾರಿ ಪ್ರಧಾನಿಯಾದ ದಾಖಲೆ ಹೊಂದಿದ್ದರು. ಪ್ರದಾನಿ ಮೋದಿ ಈ ಬಾರಿ ನೆಹರೂ ದಾಖಲೆಯನ್ನು ಸರಿಗಟ್ಟಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಎನ್‌ಡಿಎ ಸಂಸದರಿಗೆ ಸಂಸದೀಯ ನಿಯಮಗಳು ಮತ್ತು ನಡವಳಿಕೆಯನ್ನು ಅನುಸರಿಸಬೇಕೆಂದು ಕೇಳಿಕೊಂಡಿದ್ದಾರೆ. ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ನೀಡಿದ ಅತ್ಯಂತ ಬೇಜವಾಬ್ದಾರಿ ಭಾಷಣದ ನಂತರ ಮೋದಿ ಈ ಮಾತನ್ನು ಹೇಳಿದ್ದಾರೆ.

ಎನ್‌ಡಿಎ ಸಂಸದರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಮೊದಲ ಬಾರಿಗೆ ಸತತ ಮೂರನೇ ಅವಧಿಗೆ ನಾನು ಪ್ರಧಾನಿಯಾಗಿರುವುದರಿಂದ ಪ್ರತಿಪಕ್ಷಗಳು ಅಸಮಾಧಾನಗೊಂಡಿವೆ ಎಂದು ಹೇಳಿಕೊಂಡಿದ್ದಾರೆ.

ಸಂಸದರಿಗೆ ಸಂಸತ್ತಿನ ವಿಷಯಗಳನ್ನು ಅಧ್ಯಯನ ಮಾಡಲು, ಸಂಸತ್ತಿಗೆ ಹಾಜರಾಗಲು ಮತ್ತು ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸಲು ಪ್ರಧಾನಿ ಮೋದಿ ಸಂಸದರಿಗೆ ತಿಳಿಸಿದ್ದಾರೆ ಎಂದು ರಿಜಿಜು ಹೇಳಿದ್ದಾರೆ

ಪ್ರತಿಯೊಬ್ಬ ಸಂಸದರೂ ಸದನಕ್ಕೆ ಚುನಾಯಿತರಾಗಿರುವುದು ರಾಷ್ಟ್ರ ಸೇವೆಗಾಗಿ. ಯಾವುದೇ ಪಕ್ಷಕ್ಕೆ ಸೇರಿದವರಾಗಿರಲಿ ದೇಶ ಸೇವೆ ನಮ್ಮ ಆದ್ಯ ಜವಾಬ್ದಾರಿ. ಪ್ರತಿಯೊಬ್ಬ ಎನ್‌ಡಿಎ ಸಂಸದರು ದೇಶಕ್ಕೆ ಆದ್ಯತೆ ನೀಡುವ ಮೂಲಕ ಕೆಲಸ ಮಾಡಬೇಕು ಎಂದು ಪ್ರಧಾನಿ ಒತ್ತಾಯಿಸಿದರು. ಎರಡನೆಯದಾಗಿ, ಸಂಸದರ ನಡವಳಿಕೆಗೆ ಸಂಬಂಧಿಸಿದಂತೆ ಪ್ರಧಾನಿಯವರು ನಮಗೆ ಉತ್ತಮ ಮಾರ್ಗದರ್ಶನ ನೀಡಿದ್ದಾರೆ ಎಂದು ಶ್ರೀ ರಿಜಿಜು ತಿಳಿಸಿದ್ದಾರೆ.

ಹೆಚ್ಚಿನ ಸುದ್ದಿ