Sunday, July 7, 2024
Homeಟಾಪ್ ನ್ಯೂಸ್ISRO: ಪ್ರಧಾನಿ ಮೋದಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಮುಂದಾದ ಇಸ್ರೋ!

ISRO: ಪ್ರಧಾನಿ ಮೋದಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಮುಂದಾದ ಇಸ್ರೋ!

ನವದೆಹಲಿ: ಭಾರತದ ಮೊದಲ ಮಾನವನನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯುವ ಮಿಷನ್‌ ʼಗಗನಯಾನʼ ಕಾರ್ಯಾರಂಭಗೊಂಡರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೂಡಾ ಬಾಹ್ಯಾಕಾಶಕ್ಕೆ ಕಳುಹಿಸಬಹುದು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಅಧ್ಯಕ್ಷ ಎಸ್ ಸೋಮನಾಥ್ ಹೇಳಿಕೆ ನೀಡಿದ್ದಾರೆ.

ಗಗನಯಾನ ಮಿಷನ್‌ ಬಗ್ಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಸೇರಿದಂತೆ ಇತರ ಇನ್ನೂ ಹಲವು ನಿರ್ಣಾಯಕ ಜವಾಬ್ದಾರಿಗಳನ್ನು ಹೊಂದಿರುವವರು ಕೂಡಾ ನಿಸ್ಸಂಶಯವಾಗಿ ಪಾಲ್ಗೊಳ್ಳುವಂತೆ ಮಾನವನ ಬಾಹ್ಯಾಕಾಶ ಯಾನ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸುವುದು ನಾವು ಬೆಳೆಸಲು ಬಯಸುವ ಸಾಮರ್ಥ್ಯವಾಗಿದೆ. ಇದು ಗಗನಯಾನ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ವಿಶೇಷವಾಗಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ಗಗನಯಾತ್ರಿ ತರಬೇತಿ ಕಾರ್ಯಕ್ರಮಕ್ಕೆ ಕೊಡುಗೆ ನೀಡುತ್ತದೆ ಎಂದು ಹೇಳಿದರು.

ಗಗನಯಾನ ಮಿಷನ್‌ನ ಭಾಗವಾಗಿ ಇಸ್ರೋ 3 ದಿನಗಳ ಅವಧಿಯಲ್ಲಿ ಮೂವರು ಗಗನಯಾತ್ರಿಗಳನ್ನು 400 ಕಿಮೀ ದೂರದ ಕಕ್ಷೆಗೆ ಕಳುಹಿಸಿ, ನಂತರ ಅವರನ್ನು ಸುರಕ್ಷಿತವಾಗಿ ಭೂಮಿಗೆ ಹಿಂದಿರುಗಿಸಲು ಯೋಜಿಸಿದೆ.

ಹೆಚ್ಚಿನ ಸುದ್ದಿ