Sunday, July 7, 2024
Homeಕ್ರೈಂPendrive case: ನಿಯಮಿತವಾಗಿ ಏಯ್ಡ್ಸ್‌ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದ ಪ್ರಜ್ವಲ್ ರೇವಣ್ಣ!

Pendrive case: ನಿಯಮಿತವಾಗಿ ಏಯ್ಡ್ಸ್‌ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದ ಪ್ರಜ್ವಲ್ ರೇವಣ್ಣ!

ಬೆಂಗಳೂರು: ಅಶ್ಲೀಲ ವಿಡಿ ಯೋ ಪ್ರಕರಣ ಹಾಗೂ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳ ಆರೋಪಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪ್ರತಿ 4 ತಿಂಗಳಿಗೊಮ್ಮೆ ಎಚ್ ಐವಿ ಪರೀಕ್ಷೆ ನಡೆಸಿ ಮುನ್ನೆಚ್ಚರಿಕೆ ವಹಿಸುತ್ತಿದ್ದರು ಎಂಬುದು ತನಿಖೆಯಿಂದ ಹೊರಬಿದ್ದಿದೆ.

ಪ್ರಜ್ವಲ್ ಹಲವು ಮಹಿಳೆಯರ ಉಜತೆಗೆ ಲೈಂಗಿಕ ಸಂಪರ್ಕ ನಡೆಸುತ್ತಿದ್ದ ಎಂಬ ಆರೋ ಪಕ್ಕೆ ಎಚ್ ಐವಿ ಪರೀಕ್ಷೆ ಮತ್ತಷ್ಟು ಸಾಕ್ಷಿ ನೀಡಿದಂತಿದೆ. ಮಹಿಳೆಯರ ಮೇಲಿನ ಲೈಂಗಿಕ ದೌಜನ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ಹಿಂದಿನ ಚಟುವಟಿಕೆ ಬಗ್ಗೆ ತನಿಖೆ ನಡೆಸುತ್ತಿದ್ದಾಗ ಈ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

ಹಲವು ಮಹಿಳೆಯರ ಜತೆಗೆ ಸೂಕ್ತ ಸುರಕ್ಷತಾ ಸಾಧನ ಅಳವಡಿಸದೇ ದೈಹಿಕ ಸಂಪರ್ಕ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಈ ಪರೀಕ್ಷೆಗೊಳಪಟ್ಟಿರಬಹುದೆಂದು ಎಸ್‌ಐಟಿ ಅಧಿಕಾರಿಗಳು ಶಂಕಿಸಿದ್ದಾರೆ.

ಹೆಚ್ಚಿನ ಸುದ್ದಿ