Sunday, July 7, 2024
Homeಟಾಪ್ ನ್ಯೂಸ್Parliament Session : ವಿಪಕ್ಷಗಳ ಗದ್ದಲಕ್ಕೆ ಪ್ರಧಾನಿ ಮೋದಿ ಡೋಂಟ್ ಕೇರ್.. ಪ್ರಖರ ವಾಗ್ದಾಳಿ

Parliament Session : ವಿಪಕ್ಷಗಳ ಗದ್ದಲಕ್ಕೆ ಪ್ರಧಾನಿ ಮೋದಿ ಡೋಂಟ್ ಕೇರ್.. ಪ್ರಖರ ವಾಗ್ದಾಳಿ

ನವದೆಹಲಿ : ವಿಶ್ವದ ದೊಡ್ಡ ಲೋಕತಂತ್ರ ಚುನಾವಣೆಯಲ್ಲಿ ನಿರಂತರ ಸುಳ್ಳುಗಳನ್ನೇ ಹೇಳುತ್ತಾ ಬಂದ ಅವರಿಗೆ ಘೋರ ಸೋಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.


ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತಾಗಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಕ್ಕೆ ಪ್ರಧಾನಿ ನರೇಂದ್ರ ಮೋದಿ ಖಾರವಾಗಿ ಉತ್ತರಿಸಿದರು. ಮೋದಿ ಅವರು ಭಾಷಣ ಆರಂಭಿಸುತ್ತಿದ್ದಂತೆಯೇ ಗದ್ದಲಯುಂಟು ಮಾಡಿದ ವಿಪಕ್ಷನಾಯಕರು, ಪ್ರಧಾನಿ ಭಾಷಣಕ್ಕೆ ಅಡ್ಡಿಪಡಿಸಿದ ಪ್ರಸಂಗ ನಡೆಯಿತು. ಇನ್ನು ವಿಪಕ್ಷದ ನಾಯಕರ ವರ್ತನೆಗೆ ಸ್ಪೀಕರ್ ಅವರು ತೀವ್ರ ಖಂಡನೆ ವ್ಯಕ್ತಪಡಿಸಿದರು.

ಗದ್ದಲಕ್ಕೆ ಡೋಂಟ್​ ಕೇರ್ ಎನ್ನದೇ ಮೋದಿ ಮಾತು ಮುಂದುವರಿಸಿ..ವಿಪಕ್ಷಗಳು ಸುಳ್ಳುಗಳನ್ನು ಹೇಳುತಾ ಪ್ರಜಾಪ್ರಭುತ್ವ ವ್ಯವಸ್ಥಗೆ ಧಕ್ಕೆ ತಂದಿದ್ದಾರೆ. ತುಷ್ಟೀಕರಣ ರಾಜಕಾರಣ ಮಾಡಿದ್ದಾರೆ ಎಂದು ಕುಟುಕಿದರು.

ಇನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ವಂದನಾ ನಿರ್ಣಯದಲ್ಲಿ ಮೌಲ್ಯಯುತ ಚರ್ಚೆಯಾಗಿದೆ ಎಂದು ಪ್ರಧಾನಿ ಸಮರ್ಥಿಸಿಕೊಂಡರು. ಉತ್ತಮ ಆಡಳಿತಕ್ಕೆ ರಾಷ್ಟ್ರಪತಿ ಅವರು ಮಾರ್ಗದರ್ಶನ ಮಾಡಿದ್ದಾರೆ. ಕಳೆದ 10 ವರ್ಷಗಳ ಸಾಧನೆಯನ್ನು ನೋಡಿ ಜನ ನಮಗೆ ಮತ್ತೊಮ್ಮೆ ಅಧಿಕಾರ ನೀಡಿದ್ದಾರೆ. ಭ್ರಷ್ಟಾಚಾರ ತಡೆಗೆ ನಮ್ಮ ಸರ್ಕಾರ ಸಂಕಲ್ಪ ಮಾಡಿದೆ. ಕಳೆದ ಆಡಳಿತ ಅವಧಿಯಲ್ಲಿ 25 ಕೋಟಿ ಜನ ಬಡತನದಿಂದ ಹೊರ ಬಂದಿದ್ದಾರೆ ಎಂದು ಮೋದಿ ಅವರು ಶ್ಲಾಘಿಸಿದರು.
ಅತ್ತ ಮಣಿಪುರಕ್ಕೆ ನ್ಯಾಯ ಕೊಡಿಸಿ.. ನ್ಯಾಯ ಕೊಡಿಸಿ…ಎಂದು ಘೋಷಣೆ ಕೂಗುತ ವಿಪಕ್ಷನಾಯಕರು ಗದ್ದಲ ಮುಂದುವರಿಸಿದರು.

ಹೆಚ್ಚಿನ ಸುದ್ದಿ