Sunday, July 7, 2024
Homeಟಾಪ್ ನ್ಯೂಸ್VIRAL NEWS : ಗೋಬಿ, ಕಬಾಬ್ ಆಯ್ತು... ಈಗ ಪಾನಿಪೂರಿ ಪ್ರಿಯರಿಗೆ ಶಾಕ್ 

VIRAL NEWS : ಗೋಬಿ, ಕಬಾಬ್ ಆಯ್ತು… ಈಗ ಪಾನಿಪೂರಿ ಪ್ರಿಯರಿಗೆ ಶಾಕ್ 

ಗೋಬಿ, ಕಾಟನ್ ಕ್ಯಾಂಡಿ, ಕಬಾಬ್​ ತಯಾರಿಕೆಯಲ್ಲಿ ಕೃತಕ ಬಣ್ಣ ಬಳಕೆಗೆ ನಿಷೇಧ ಏರಿದ ಬೆನ್ನಲ್ಲೇ ಇದೀಗ ಪಾನಿಪುರಿಗೆ ಬಳಸುವ  ಸಾಸ್, ಮೀಠಾ, ಖಾರದ ಪುಡಿಯಲ್ಲಿ ಐದು ಬಗೆಯ ರಾಸಾಯನಿಕ ಅಂಶ ಪತ್ತೆಯಾಗಿದೆ.

ಈ ಹಿನ್ನಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ರಾಜ್ಯದ ನಾನಾ ಭಾಗದಲ್ಲಿ ಪಾನಿಪುರಿ ಮಾದರಿಗಳನ್ನ ಸಂಗ್ರಹ ಮಾಡಿ ಪರೀಕ್ಷಿಸಿದೆ. ಅದರಲ್ಲಿ ಬೆಂಗಳೂರಿನ  49 ಕಡೆಗಳಲ್ಲಿ ಪಾನಿಪೂರಿ ತಯಾರಿಕೆ ಪದಾರ್ಥಗಳಲ್ಲಿ ಕ್ಯಾನ್ಸರ್  ಕಾರಕ ಕೆಮಿಕಲ್‌ಗಳು ಇರೋದು ಪತ್ತೆಯಾಗಿದೆ.

ಈ ಹಿಂದೆ ಕೆಲವು ಆಹಾರಗಳಲ್ಲಿ ಕೃತಕ ಬಣ್ಣದ ಬಳಕೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಗೋಬಿ ಮಂಚೂರಿ, ಕಾಟನ್ ಕ್ಯಾಂಡಿ, ಕಬಾಬ್ ಗಳಲ್ಲಿ ಕೃತಕ ಬಣ್ಣಗಳ ಬಳಕೆಯನ್ನ ನಿಷೇಧಿಸಲಾಗಿತ್ತು.

ಇದೀಗ ಪಾನಿಪುರಿ ಬಳಸುವ ಪದಾರ್ಥಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿದ್ದು, ಈ ವಸ್ತುಗಳನ್ನು ಬ್ಯಾನ್  ಮಾಡಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಿರ್ಧರಿಸಿದೆ ಎನ್ನಲಾಗಿದೆ. 

ಹೆಚ್ಚಿನ ಸುದ್ದಿ