Sunday, July 7, 2024
Homeಟಾಪ್ ನ್ಯೂಸ್Pakistan: ಉಪ ಚುನಾವಣೆ ಪ್ರಚಾರದ ವೇಳೆ ಬಾಂಬ್ ಬ್ಲಾಸ್ಟ್ - ಮೂವರು ಸಾವು

Pakistan: ಉಪ ಚುನಾವಣೆ ಪ್ರಚಾರದ ವೇಳೆ ಬಾಂಬ್ ಬ್ಲಾಸ್ಟ್ – ಮೂವರು ಸಾವು

ಪಾಕಿಸ್ತಾನದಲ್ಲಿ ಬಾಂಬ್‌ ಬ್ಲಾಸ್ಟ್‌ ಗೊಂಡಿದ್ದು ಮಾಜಿ ಸೆನೆಟರ್ ಸೇರಿ ಮೂವರು ಸಾವನ್ನಪ್ಪಿದ್ದಾರೆ. ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿಯಿಂದ 45 ಕಿಲೋಮೀಟರ್ ದೂರದಲ್ಲಿರುವ ಬುಡಕಟ್ಟು ಪ್ರದೇಶದಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ರಿಮೋಟ್ ಕಂಟ್ರೋಲ್ ಬಳಸಿ ಸ್ಫೋಟಿಸಲಾಗಿದೆ ಎನ್ನಲಾಗುತ್ತಿದ್ದು, ಅಪಘಾತದ ಸಮಯದಲ್ಲಿ, ಸೆನೆಟರ್ ಹಿದಾಯತುಲ್ಲಾ ಖಾನ್ ಮಮಂಡ್ ಬಜೌರ್ ಪ್ರದೇಶದ ದಾಮೋದೋಲಾ ಪ್ರದೇಶದಲ್ಲಿದ್ದರು.

ಈ ಘಟನೆಯ ಸಮಯದಲ್ಲಿ ಉಪಚುನಾವಣೆಯಲ್ಲಿ ತಮ್ಮ ಸೋದರಳಿಯ ನಜೀಬುಲ್ಲಾ ಖಾನ್ ಪರ ಪ್ರಚಾರ ನಡೆಸುತ್ತಿದ್ದರು. ಪಾಕಿಸ್ತಾನದ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಜುಲೈ 12 ರಂದು ಉಪ ಚುನಾವಣೆ ನಡೆಯಲಿದೆ.

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಮುಖ್ಯಮಂತ್ರಿ ಅಲಿ ಅಮೀನ್ ಗೊಂಡಾಪುರ್, ಮುಖ್ಯ ಕಾರ್ಯದರ್ಶಿ ನದೀಮ್ ಅಸ್ಲಾಂ ಚೌಧರಿ ಮತ್ತು ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಕೂಡ ಈ ಸ್ಫೋಟವನ್ನು ಖಂಡಿಸಿದ್ದಾರೆ. ಮಾಜಿ ಸೆನೆಟರ್ ಮತ್ತು ಮೂವರ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಅಲಿ ಅಮೀನ್ ಅವರು ಪ್ರಕರಣದ ಪ್ರತಿಯೊಂದು ಅಂಶವನ್ನು ತನಿಖೆ ಮಾಡಿ ಪ್ರಾಂತೀಯ ಪೊಲೀಸರಿಂದ ವರದಿ ಕೇಳಿದ್ದಾರೆ.

ಹೆಚ್ಚಿನ ಸುದ್ದಿ