Sunday, July 7, 2024
Homeಚುನಾವಣೆ 2023Narendra Modi: ಹಿರಿಯ ಮುತ್ಸದ್ದಿ ಎಲ್.ಕೆ.ಅಡ್ವಾಣಿ ಆಶೀರ್ವಾದ ಪಡೆದ ನರೇಂದ್ರ ಮೋದಿ

Narendra Modi: ಹಿರಿಯ ಮುತ್ಸದ್ದಿ ಎಲ್.ಕೆ.ಅಡ್ವಾಣಿ ಆಶೀರ್ವಾದ ಪಡೆದ ನರೇಂದ್ರ ಮೋದಿ

ನವದೆಹಲಿ : ಈಗಾಗಲೇ NDA ಸಂಸದೀಯ ಪಕ್ಷದ ನಾಯಕರಾಗಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಲಾಗಿದೆ. ಇನ್ನು ಮೂರನೇ ಬಾರಿಗೆ ಪ್ರಧಾನಿಯಾಗಲು ಸಿದ್ದರಾಗಿರುವ ಹಂಗಾಮಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪಕ್ಷದ ಹಿರಿಯ ಮುತ್ಸದ್ದಿ ಎಲ್.ಕೆ.ಅಡ್ವಾಣಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದೊಕೊಂಡರು.


ಅಡ್ವಾಣಿ ಅವರ ನಿವಾಸಕ್ಕೆ ತೆರಳಿದ ಮೋದಿ ಅವರು ಹೂಗುಚ್ಛ ನೀಡಿ ಅಡ್ವಾನಿ ಅವರ ಚರಣಗಳಿ ನಮಸ್ಕರಿಸಿದರು. ಇದಾದ ಬಳಿಕ ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ ಅವರ ನಿವಾಸಕ್ಕೂ ಮೋದಿ ಭೇಟಿ ಆಶೀರ್ವಾದ ಪಡೆದರು.

ಇಂದು ದೆಹಲಿಯಲ್ಲಿ ನಡೆದ ಎನ್ಡಿಎ ಮೈತ್ರಿಕೂಟದ ಸಂಸದೀಯ ಪಕ್ಷದ ಸಭೆಯಲ್ಲಿ ನರೇಂದ್ರ ಮೋದಿ ಅವರನ್ನು ಬಿಜೆಪಿ ಮತ್ತು ಎನ್ಡಿಎ ನಾಯಕರಾಗಿ ಆಯ್ಕೆ ಮಾಡಲಾಗಿತ್ತು. ಇದಕ್ಕೆ ಸಂಸದೀಯ ಮಂಡಳಿಯೂ ಅನುಮೋದನೆಯನ್ನು ಸಹ ನೀಡಿದೆ.

ಹೆಚ್ಚಿನ ಸುದ್ದಿ