Sunday, July 7, 2024
Homeಕ್ರೈಂVIRAL NEWS : ಮಧ್ಯಪ್ರದೇಶದಲ್ಲಿ ಮೂರು ವರ್ಷದಲ್ಲಿ 31 ಸಾವಿರ ಮಹಿಳೆಯರು ನಾಪತ್ತೆ..!

VIRAL NEWS : ಮಧ್ಯಪ್ರದೇಶದಲ್ಲಿ ಮೂರು ವರ್ಷದಲ್ಲಿ 31 ಸಾವಿರ ಮಹಿಳೆಯರು ನಾಪತ್ತೆ..!

ಮಧ್ಯ ಪ್ರದೇಶ : ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ 31 ಸಾವಿರಕ್ಕೂ ಅಧಿಕ ಮಹಿಳೆಯರು ಹಾಗೂ ಬಾಲಕಿಯರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಅಧಿಕೃತ ಅಂಕಿಅಂಶಗಳ ಪ್ರಕಾರ 2021 ರಿಂದ 2024ರ ನಡುವೆ ಮಧ್ಯ ಪ್ರದೇಶದಲ್ಲಿ 28,857 ಮಹಿಳೆಯರು ಹಾಗೂ 2944 ಬಾಲಕಿಯರು ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ.

ಕಾಂಗ್ರೆಸ್ ಶಾಸಕ ಮತ್ತು ಮಾಜಿ ಗೃಹ ಸಚಿವ ಬಾಲಾ ಬಚ್ಚನ್ ಅವರು ಕೇಳಿದ ಪ್ರಶ್ನೆಗೆ ಉತ್ತರವಾಗಿ ರಾಜ್ಯ ವಿಧಾನಸಭೆಯಲ್ಲಿ ಈ ಅಂಕಿಅಂಶಗಳನ್ನು ಬಹಿರಂಗಪಡಿಸಲಾಗಿದ್ದು, ಅಂಕಿಅಂಶಗಳ ಪ್ರಕಾರ ಮಧ್ಯಪ್ರದೇಶದಲ್ಲಿ ಪ್ರತಿದಿನ ಸರಾಸರಿ 28 ಮಹಿಳೆಯರು ಮತ್ತು ಮೂವರು ಹುಡುಗಿಯರು ಕಾಣೆಯಾಗುತ್ತಿದ್ದಾರೆ. ಈ ಆತಂಕಕಾರಿ ಸಂಖ್ಯೆಯ ಹೊರತಾಗಿಯೂ, ಕೇವಲ 724 ನಾಪತ್ತೆ ಪ್ರಕರಣಗಳು ಅಧಿಕೃತವಾಗಿ ದಾಖಲಾಗಿವೆ.

ಇನ್ನು ಉಜ್ಜಯಿನಿಯಲ್ಲಿ ಕಳೆದ 34 ತಿಂಗಳಿಂದ 676 ಮಹಿಳೆಯರು ನಾಪತ್ತೆಯಾಗಿದ್ದು, ಈ ಬಗ್ಗೆ ಇಲ್ಲಿಯವರೆಗೆ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ.

ಸಾಗರ ಜಿಲ್ಲೆಯಲ್ಲಿ 245 ಬಾಲಕಿಯರು ನಾಪತ್ತೆಯಾಗಿರುವ ಬಗ್ಗೆ ದಾಖಲಾಗಿದೆ. ಇಂಧೋರ್‌ನಲ್ಲಿ ಬರೋಬ್ಬರಿ 2384 ಮಹಿಳೆಯರು ನಾಪತ್ತೆಯಾಗಿದ್ದು, ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಈ ಜಿಲ್ಲೆಯಲ್ಲೇ ಅತಿ ಹೆಚ್ಚು ಮಹಿಳೆಯರು ಕಾಣೆಯಾಗಿದ್ದಾರೆ.

ಪ್ರತಿ ತಿಂಗಳು ಇಂಧೋರ್‌ನಲ್ಲಿ  ಸರಾಸರಿ 479 ಮಹಿಳೆಯರು ನಾಪತ್ತೆಯಾಗುತ್ತಿದ್ದು, ಕೇವಲ 15 ಪ್ರಕರಣಗಳನ್ನು ಮಾತ್ರ ದಾಖಲಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. 

ಹೆಚ್ಚಿನ ಸುದ್ದಿ