Sunday, July 7, 2024
Homeಟಾಪ್ ನ್ಯೂಸ್KOREA: ಮದುವೆಯ ಉಡುಪು, ಜೀನ್ಸ್‌ಗೂ ಸಹ ಉತ್ತರ ಕೊರಿಯಾದಲ್ಲಿ ನಿಷೇಧ!

KOREA: ಮದುವೆಯ ಉಡುಪು, ಜೀನ್ಸ್‌ಗೂ ಸಹ ಉತ್ತರ ಕೊರಿಯಾದಲ್ಲಿ ನಿಷೇಧ!

ಕೊರಿಯಾ: ಫ್ಯಾಷನ್, ಸಂಗೀತ ಮತ್ತು ಭಾಷೆ ಸೇರಿದಂತೆ ದಕ್ಷಿಣ ಕೊರಿಯಾದಿಂದ (South Korea) ಪ್ರಭಾವಿತವಾಗಿದೆ ಎಂದು ಪರಿಗಣಿಸಲಾದದ್ದನ್ನು ಉತ್ತರ ಕೊರಿಯಾ (North Korea) ವ್ಯಾಪಕವಾಗಿ ದಮನ ಮಾಡುತ್ತಿದೆ ಎಂದು ಹೊಸ ವರದಿಯನ್ನು ದಕ್ಷಿಣ ಕೊರಿಯಾದ ಏಕೀಕರಣ ಸಚಿವಾಲಯ ಬಿಡುಗಡೆ ಮಾಡಿದೆ.

ನೆರೆಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ದಕ್ಷಿಣ ಕೊರಿಯಾ ಈ ವರದಿಯನ್ನು ಬಿಡುಗಡೆ ಮಾಡಿದೆ. ಮದುವೆಯಲ್ಲಿ ಬಿಳಿ ಉಡುಪನ್ನು ಧರಿಸುವುದು ಅಥವಾ ವರನು ವಧುವನ್ನು ಎತ್ತುವುದು, ವೈನ್ ಗ್ಲಾಸ್‌ಗಳಿಂದ ಮದ್ಯಪಾನ ಮಾಡುವುದು ದಕ್ಷಿಣ ಕೊರಿಯಾದ ಸಂಪ್ರದಾಯಗಳು ಎಂದು ಪರಿಗಣಿಸುತ್ತಾರೆ. ಹೀಗಾಗಿ ಈ ರೀತಿಯ ಸಂಸ್ಕೃತಿಯನ್ನು ಉತ್ತರ ಕೋರಿಯಾ ಹತೋಟಿಯಲ್ಲಿಡಲು ಕಾರ್ಯಮಗ್ನರಾಗಿದೆ.

ಅದೇ ರೀತಿ ಜೀನ್ಸ್, ಸನ್‌ಗ್ಲಾಸ್‌ನಂತಹ ಕೆಲವು ಫ್ಯಾಷನ್ ವಸ್ತುಗಳನ್ನು ಪ್ರತಿ ಕ್ರಾಂತಿಕಾರಿ ಎಂದು ಪರಿಗಣಿಸಲಾಗಿದೆ ಎಂದು ವರದಿ ತಿಳಿಸಿದೆ. ಆದರೆ ಈ ಉಲ್ಲಂಘನೆಗಳಿಗೆ ಶಿಕ್ಷೆ ಯಾವುದು ಎನ್ನುವುದು ಅಸ್ಪಷ್ಟವಾಗಿದೆ.

ದಕ್ಷಿಣ ಕೊರಿಯಾದ ಸಿನಿಮಾ ರೀತಿಯ ಮನರಂಜನೆಯನ್ನು ವೀಕ್ಷಿಸುವುದು ಅಥವಾ ವಿತರಿಸುವುದನ್ನು 2020ರ ಕಾನೂನು ಗಂಭೀರವಾಗಿ ಪರಿಣಮಿಸುತ್ತದೆ. ಇದರ ಬೆನ್ನಲ್ಲೇ 2022ರಲ್ಲಿ ದಕ್ಷಿಣ ಕೋರಿಯಾದ ಹಾಡನ್ನು ಕೇಳಿದ್ದ ಹಾಗೂ ಸಿನಿಮಾವನ್ನು ವೀಕ್ಷಿಸಿದ್ದ ಯುವಕನನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಲಾಗಿತ್ತು.

ಹೆಚ್ಚಿನ ಸುದ್ದಿ