Sunday, July 7, 2024
Homeಟಾಪ್ ನ್ಯೂಸ್BORAD EXAM : ಈ ವರ್ಷ ಬೋರ್ಡ್‌ ಎಕ್ಸಾಂ ಇಲ್ಲ!

BORAD EXAM : ಈ ವರ್ಷ ಬೋರ್ಡ್‌ ಎಕ್ಸಾಂ ಇಲ್ಲ!

ಬೆಂಗಳೂರು: ರಾಜ್ಯ ಪಠ್ಯ ಕ್ರಮದ ಶಾಲೆಗಳ 5, 8 ಹಾಗೂ 9ನೇ ತರಗತಿ ಮಕ್ಕಳಿಗೆ ಈ ವರ್ಷ ದ ಶೈಕ್ಷಣಿಕ‌ ವರ್ಷದಲ್ಲಿ ಬೋರ್ಡ್ ಮಾದರಿ ಪರೀಕ್ಷೆ ನಡೆಸಲಾಗುವುದಿಲ್ಲ ಎಂದು ರಾಜ್ಯ ಶಿಕ್ಷಣ ಇಲಾಖೆ ತಿಳಿಸಿದೆ. ಈ ತರಗತಿಗಳ ಬೋರ್ಡ್ ಪರೀಕ್ಷೆಯ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿ ಇರುವುದರಿಂದ 2024-25ನೇ ಸಾಲಿನಲ್ಲಿ ಈ ಹಿಂದೆ ಇದ್ದಂತೆ ಎಲ್ಲ ತರಗತಿಗಳಿಗೂ ಮೌಲ್ಯಾಂಕನ ಹಾಗೂ ಲಿಖಿತ ಪರೀಕ್ಷಾ ಪದ್ಧತಿಯೇ ಮುಂದುವರಿಯಲಿದೆ ಎಂದು ಇಲಾಖೆ ಸೂಚಿಸಿದೆ.

ಇದರ ಜತೆಗೆ ಶಾಲಾ ಬ್ಯಾಗ್‌ ಹೊರೆ ತಗ್ಗಿಸಲು 2024-25ನೇ ಸಾಲಿನಲ್ಲಿ ಪಠ್ಯ ಪುಸ್ತಕಗಳನ್ನು ಭಾಗ-1 ಮತ್ತು ಭಾಗ-2ರಂತೆ ಪ್ರತ್ಯೇಕವಾಗಿ ಮುದ್ರಿಸಲಾಗಿದೆ. ಭಾಗ-1ರ ಪಠ್ಯ ಶೇ.50 ಹಾಗೂ ಭಾಗ-2ರ ಪಠ್ಯ ಶೇ.50 ಒಟ್ಟು ಸೇರಿ ಶೇ.100ರಷ್ಟು ಪಠ್ಯವನ್ನು ಮೌಲ್ಯಾಂಕನಕ್ಕೆ ಒಳಪಡಿಸುವ ವಿಧಾನವನ್ನು ನೀಡಲಾಗಿದ್ದು, ಅದರಂತೆ ಕ್ರಮವಹಿಸಲಾಗುವುದು ಎಂದು ಇಲಾಖೆ ಸ್ಪಷಪಡಿಸಿದೆ.

2023-24ರ ಶೈಕ್ಷಣಿಕ ವರ್ಷದಲ್ಲಿ ಸರ್ಕಾರ ನಡೆಸಿದ್ದ ಬೋರ್ಡ್ ಪರೀಕ್ಷೆಯಿಂದ ವಿದ್ಯಾರ್ಥಿಗಳು ಸಂಕಷ್ಟ ಎದುರಿಸಿದ್ದರು. ಪ್ರಕರಣ ಸುಪ್ರಿಂ ಕೋರ್ಟ್ ವರೆಗೂ ವಿಚಾರಣೆಗೆ ಹೋಗಿತ್ತು.

ಹೆಚ್ಚಿನ ಸುದ್ದಿ