Sunday, July 7, 2024
Homeಟಾಪ್ ನ್ಯೂಸ್NEETA AMBANI : ಸಾಮಾನ್ಯರಂತೆ ಚಾಟ್ಸ್ ತಿಂದ ನೀತಾ ಅಂಬಾನಿ - VIDEO

NEETA AMBANI : ಸಾಮಾನ್ಯರಂತೆ ಚಾಟ್ಸ್ ತಿಂದ ನೀತಾ ಅಂಬಾನಿ – VIDEO

ವಾರಣಾಸಿ : ದೇಶದ ದೊಡ್ಮನೆ ಮದುವೆ ಸಂಭ್ರಮ ಜೋರಾಗಿದ್ದು, ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಮಗನ ಮದುವೆಯ ಮೊದಲ ಪತ್ರಿಕೆಯನ್ನು ಕಾಶಿಯ ಭಗವಾನ್ ಈಶ್ವರನಿಗೆ ಅರ್ಪಿಸಿ, ನಂತರ , ವಾರಣಾಸಿಯ ಪ್ರಸಿದ್ಧ ಚಾಟ್ ಶಾಪ್ ಗೆ ಭೇಟಿ ನೀಡಿದ್ದಾರೆ.

ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್​ ಮದುವೆ ಜುಲೈ 12 ರಂದು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್​ನಲ್ಲಿರುವ ಪ್ರತಿಷ್ಠಿತ ಜಿಯೋ ವರ್ಲ್ಟ್​ ಕನ್ವೆನ್ಷನ್​ ಸೆಂಟರ್​ನಲ್ಲಿ ಅದ್ಧೂರಿಯಾಗಿ ನಡೆಯಲಿದ್ದು, ಈ ಹಿನ್ನಲೆ ಮದುವೆ ಪತ್ರಿಕೆಯ ಸಮೇತ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದಿದ್ದಾರೆ. 

ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ನೀತಾ ಅಂಬಾನಿ ವಾರಾಣಸಿಯ ಪ್ರಸಿದ್ಧ ಕಾಶಿ ಚಾಟ್​ ಅಂಗಡಿಗೆ ಭೇಟಿ ನೀಡಿ, ಸಾಮಾನ್ಯರಂತೆ, ಬನಾರಸಿ ಚಾಟ್​, ಬನಾರಸಿ ಟೊಮೆಟೋ ಚಾಟ್​, ಪಕೋಡಾ, ಗೋಲ್ಗಪ್ಪಾ ಸವಿದರು. 

ಚಾಟ್ ತಿಂದ ಬಳಿಕ ಅಂಗಡಿಯವನ ಜೊತೆಗೆ ನೀತಾ ಅಂಬಾನಿ ಸೀಕ್ರೆಟ್​ ರೆಸಿಪಿಯ ಬಗ್ಗೆ ಕೇಳಿದಾಗ ಆತ ಮುಗುಳುನಕ್ಕು ಕೈ ಜೋಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್​ ಆಗುತ್ತಿದೆ.

ಹೆಚ್ಚಿನ ಸುದ್ದಿ