Sunday, July 7, 2024
Homeಟಾಪ್ ನ್ಯೂಸ್JOB ALERT: ನಿಮ್ಹಾನ್ಸ್​​ನಲ್ಲಿ ಕೆಲಸ ಖಾಲಿ ಇದೆ; ಹುದ್ದೆ ಕುರಿತು ಹೆಚ್ಚಿನ ವಿವರ ಇಲ್ಲಿದೆ

JOB ALERT: ನಿಮ್ಹಾನ್ಸ್​​ನಲ್ಲಿ ಕೆಲಸ ಖಾಲಿ ಇದೆ; ಹುದ್ದೆ ಕುರಿತು ಹೆಚ್ಚಿನ ವಿವರ ಇಲ್ಲಿದೆ

ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 8 NMHS ಸರ್ವೇ ಫೀಲ್ಡ್​ ಡೇಟಾ ಕಲೆಕ್ಟರ್, ಸರ್ವೇ ಕೋಆರ್ಡಿನೇಟರ್​ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಜೂನ್ 22, 2024 ರಂದು ಬೆಳಗ್ಗೆ 10.30ಕ್ಕೆ ಸಂದರ್ಶನ ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಹುದ್ದೆಯ ಮಾಹಿತಿ:
NMHS ಸರ್ವೇ ಕೋಆರ್ಡಿನೇಟರ್​ -1
NMHS ಸರ್ವೇ ಫೀಲ್ಡ್​ ಡೇಟಾ ಕಲೆಕ್ಟರ್ -7

ಶೈಕ್ಷಣಿಕ ಅರ್ಹತೆ:
ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಸ್ನಾತಕೋತ್ತರ ಪದವಿ​ ಪೂರ್ಣಗೊಳಿಸಿರಬೇಕು.

ವಯೋಮಿತಿ:
NMHS ಸರ್ವೇ ಕೋಆರ್ಡಿನೇಟರ್​ – 45 ವರ್ಷ
NMHS ಸರ್ವೇ ಫೀಲ್ಡ್​ ಡೇಟಾ ಕಲೆಕ್ಟರ್ -40 ವರ್ಷ

ವೇತನ:
NMHS ಸರ್ವೇ ಕೋಆರ್ಡಿನೇಟರ್​ -ಮಾಸಿಕ 55,000 ರೂ.
NMHS ಸರ್ವೇ ಫೀಲ್ಡ್​ ಡೇಟಾ ಕಲೆಕ್ಟರ್ -ಮಾಸಿಕ 45,000 ರೂ.

ಉದ್ಯೋಗದ ಸ್ಥಳ:
ಬೆಂಗಳೂರು

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸ್ಕಿಲ್ ಟೆಸ್ಟ್
ಸಂದರ್ಶನ

ಸಂದರ್ಶನ ನಡೆಯುವ ಸ್ಥಳ:
NBRC
4ನೇ ಮಹಡಿ
ನಿಮ್ಹಾನ್ಸ್
ಬೆಂಗಳೂರು-560029
ಕರ್ನಾಟಕ

ಸಂದರ್ಶನ ನಡೆಯುವ ದಿನ: ಜೂನ್ 22, 2024 ಬೆಳಗ್ಗೆ 10.30 ಗಂಟೆಗೆ

 

ಹೆಚ್ಚಿನ ಸುದ್ದಿ