Sunday, July 7, 2024
Homeಕ್ರೈಂSHOCKING: ಚರಂಡಿಯಲ್ಲಿ ಶವವಾಗಿ ನವಜಾತ ಶಿಶು ಪತ್ತೆ

SHOCKING: ಚರಂಡಿಯಲ್ಲಿ ಶವವಾಗಿ ನವಜಾತ ಶಿಶು ಪತ್ತೆ

ಹುಬ್ಬಳ್ಳಿ: ರಸ್ತೆ ಪಕ್ಕದ ಚರಂಡಿವೊಂದರಲ್ಲಿ ಶವವಾಗಿ ನವಜಾತ ಶಿಶು (Newborn Baby) ಪತ್ತೆ ಆಗಿರುವ ಘಟನೆ ಹುಬ್ಬಳ್ಳಿಯ (Hubballi) ಗಾಮನಗಟ್ಟಿ ಗ್ರಾಮದ ತಾರಿಹಾಳ ಬಳಿ ನಡೆದಿದೆ.

ತಾರಿಹಾಳ ಬಳಿ ಇರುವ ರಸ್ತೆ ಪಕ್ಕದ ಚರಂಡಿಯಲ್ಲಿ ನವಜಾತು ಶಿಶು ಚರಂಡಿಗೆ ಎಸೆದಿದ್ದು, ಯಾರದೆಂಬುದು ತಿಳಿದು ಬಂದಿಲ್ಲ. ಆದರೆ ನವಜಾತ ಶಿಶು ಚರಂಡಿಯಲ್ಲಿ ಶವವಾಗಿ ಪತ್ತೆ ಆಗಿರುವುದನ್ನು ಸಾರ್ವಜನಿಕರು ಎಪಿಎಂಸಿ ನವನಗರ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತ ನವಜಾತ ಶಿಶುವನ್ನು ಚರಂಡಿಯಿಂದ ತೆಗೆದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಹೆಚ್ಚಿನ ಸುದ್ದಿ