Sunday, July 7, 2024
Homeಟಾಪ್ ನ್ಯೂಸ್Nepal politics: ನೇಪಾಳದಲ್ಲಿ ರಾಜಕೀಯ ಅಸ್ಥಿರತೆ - ಸಂಸತ್ ವಿಸರ್ಜಿಸಿದ ಪ್ರಧಾನಿ!

Nepal politics: ನೇಪಾಳದಲ್ಲಿ ರಾಜಕೀಯ ಅಸ್ಥಿರತೆ – ಸಂಸತ್ ವಿಸರ್ಜಿಸಿದ ಪ್ರಧಾನಿ!

ನವದೆಹಲಿ: ಸತತ ಎರಡು ದಿನಗಳ ರಾಜಕೀಯ ಕಲಹದ ಬಳಿಕ ನೇಪಾಳದಲ್ಲಿ ಪ್ರಧಾನಿ ಪುಷ್ಪ ಕಮಲ್ ದಹಾಲ್ ( ಪ್ರಚಂಡ)ನೇತೃತ್ವದ ಸರ್ಕಾರವು ಪತನಗೊಂಡಿದ್ದು, ಸಮ್ಮಿಶ್ರ ಸಚಿವರು ಸಾಮೂಹಿಕ ರಾಜೀನಾಮೆ ಸಲ್ಲಿಸಿ ತಮ್ಮ ಬೆಂಬಲವನ್ನು ಹಿಂತೆಗೆದುಕೊಂಡಿದ್ದಾರೆ.

ದಹಾಲ್ ನೇತೃತ್ವದ ಸರ್ಕಾರದ ಪ್ರಮುಖ ಮಿತ್ರ ಪಕ್ಷವಾದ ನೇಪಾಳದ ಕಮ್ಯುನಿಸ್ಟ್ ಪಾರ್ಟಿ-ಯುನಿಫೈಡ್ ಮಾರ್ಕ್ಸ್‌ವಾದಿ ಲೆನಿನಿಸ್ಟ್ (CPN-UML), ಮಂಗಳವಾರ ನೀಡಲಾದ 24 ಗಂಟೆಗಳ ಗಡುವು ಮುಕ್ತಾಯಗೊಂಡ ನಂತರ ಸಂಸತ್ ನಿಂದ ಹೊರ ನಡೆದಿದೆ. ಸರ್ಕಾರವನ್ನು ವಿಸರ್ಜಿಸಲು ಪ್ರಧಾನಿ ದಹಾಲ್‌ಗೆ 24 ಗಂಟೆಗಳ ಗಡುವನ್ನು ನೀಡಿತ್ತು. ಮಾರ್ಚ್ 4 ರಿಂದ ಪ್ರಧಾನಿ ದಹಾಲ್ ಅವರ ಸಂಪುಟದ ಭಾಗವಾಗಿದ್ದ ಸಿಪಿಎನ್-ಯುಎಂಎಲ್ ಪಕ್ಷದ ಎಂಟು ಸಚಿವರು ಬುಧವಾರ (ಜುಲೈ 3) ರಾಜೀನಾಮೆ ನೀಡಿದರು. ತಮ್ಮ ಪಕ್ಷದ ನಾಯಕ, ಯುಎಂಎಲ್ ಅಧ್ಯಕ್ಷ ಕೆಪಿ ಶರ್ಮಾ ಒಲಿ ಅವರನ್ನು ಬಾಲ್ಕೋಟ್‌ನಲ್ಲಿರುವ ಅವರ ಮನೆಯಲ್ಲಿ ಮೊದಲ ಭೇಟಿಯಾದ ನಂತರ ಅವರು ಬಲುವಾಟರ್‌ನಲ್ಲಿರುವ ಅವರ ನಿವಾಸದಲ್ಲಿ ಪ್ರಧಾನಿಗೆ ರಾಜೀನಾಮೆ ಸಲ್ಲಿಸಿದರು.

ನೇಪಾಳದ ಮುಂದಿನ ನಡೆ:ಯುಎಎಲ್ ಮತ್ತು ಕಾಂಗ್ರೆಸ್ ಪಕ್ಷಗಳು ಹೊಸ ಸರ್ಕಾರ ರಚಿಸಲು ಒಪ್ಪಿಕೊಂಡಿವೆ. ಮೊದಲ ಒಂದೂವರೆ ವರ್ಷ ಕೆ.ಪಿ ಒಲಿ ಪ್ರಧಾನಿಯಾಗಲಿದ್ದು, ನಂತರ ಉಳಿದ ಅವಧಿಗೆ ಮಾಜಿ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಹೆಚ್ಚಿನ ಸುದ್ದಿ