Sunday, July 7, 2024
Homeಟಾಪ್ ನ್ಯೂಸ್JOB ALERT: ಯುಪಿಎಸ್‌ಸಿ ಎನ್‌ಡಿಎ, ಎನ್‌ಎ ನೇಮಕ ಅಧಿಸೂಚನೆ: ಪಿಯು ಪಾಸಾದವರಿಗೆ ಉದ್ಯೋಗಾವಕಾಶ

JOB ALERT: ಯುಪಿಎಸ್‌ಸಿ ಎನ್‌ಡಿಎ, ಎನ್‌ಎ ನೇಮಕ ಅಧಿಸೂಚನೆ: ಪಿಯು ಪಾಸಾದವರಿಗೆ ಉದ್ಯೋಗಾವಕಾಶ

ಬೆಂಗಳೂರು: ಕೇಂದ್ರ ಲೋಕ ಸೇವಾ ಆಯೋಗದಿಂದ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (National Defense Academy – NDA) ಮತ್ತು ನೌಕಾ ಅಕಾಡೆಮಿ (Naval Academy-NA) ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ. ಪಿಯುಸಿ, ಪದವಿ ಅರ್ಹತೆ ಹೊಂದಿರುವ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆ ವಿವರ: ಒಟ್ಟ 863 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಯಾವ ವಿಭಾಗದಲ್ಲಿ ಎಷ್ಟು ಹುದ್ದೆಗಳು ಎಂಬ ಮಾಹಿತಿ ಇಲ್ಲಿದೆ.

  • ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಸೇನೆ) – 208
  • ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ನೌಕೆ) – 42
  • ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ವಾಯು ಸೇನೆ- ಹಾರಾಟ) – 92
  • ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ವಾಯು ಸೇನೆ- ಗ್ರೌಂಡ್​ ಡ್ಯೂಟಿ) – 18
  • ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ವಾಯು ಸೇನೆ -ಗ್ರೌಂಡ್​ ಡ್ಯೂಟಿ-ತಾಂತ್ರಿಕೇತರ) – 10
  • ನೌಕಾ ಅಕಾಡೆಮಿ – 34
  • ಭಾರತೀಯ ಸೇನಾ ಅಕಾಡೆಮಿ – 100
  • ಭಾರತೀಯ ನೌಕಾ ಅಕಾಡೆಮಿ -32
  • ವಾಯು ಸೇನಾ ಅಕಾಡೆಮಿ – 32
  • ಆಫೀಸರ್​ ಟ್ರೈನಿಂಗ್​ ಅಕಾಡೆಮಿ (ಪುರುಷ)- 276
  • ಆಫೀಸರ್​ ಟ್ರೈನಿಂಗ್​ ಅಕಾಡೆಮಿ (ಮಹಿಳಾ) -19

ವಿದ್ಯಾರ್ಹತೆ: ಎನ್​ಡಿಎ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿ ಪೂರ್ಣಗೊಳಿಸಿರಬೇಕು. ಭಾರತೀಯ ಸೇನಾ ಅಕಾಡೆಮಿ ಹುದ್ದೆಗೆ ಪದವಿ, ಭಾರತೀಯ ನೌಕಾ ಅಕಾಡೆಮಿಗೆ ಇಂಜಿನಿಯರಿಂಗ್​ ಪದವಿ, ವಾಯು ಸೇನಾ ಅಕಾಡೆಮಿಗೆ ಪದವಿ, ಇಂಜಿನಿಯರಿಂಗ್​ ಪದವಿ, ಆಫೀಸರ್​ ಟ್ರೈನಿಂಗ್​ ಅಕಾಡೆಮಿಗೆ ಪದವಿ ಪೂರ್ಣಗೊಳಿಸಿರಬೇಕು

ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 2 ಜನವರಿ​ 2006 ಮತ್ತು 1 ಜನವರಿ 2009ರ ನಡುವೆ ಜನಿಸಿರಬೇಕು.

ಐಎಂಎ ಮತ್ತು ಭಾರತೀಯ ನೌಕಾ ಸೇನೆಗೆ ಅಭ್ಯರ್ಥಿಗಳು 2 ಜುಲೈ 2001 ಮತ್ತು 1 ಜುಲೈ 2006ರ ನಡುವೆ ಜನಿಸಿರಬೇಕು.

ವಾಯು ಸೇನಾ ಅಕಾಡೆಮಿಗೆ ಕನಿಷ್ಠ 20 ಮತ್ತು ಗರಿಷ್ಠ 24 ವರ್ಷ ವಯೋಮಿತಿ ಹೊಂದಿರಬೇಕು.

ಅರ್ಜಿ ಸಲ್ಲಿಕೆ: ಈ ಹುದ್ದೆಗಳಿಗೆ ಉದ್ಯೋಗಾಕಾಂಕ್ಷಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಎನ್​ಡಿಎ ಮತ್ತು ನೌಕಾ ಅಕಾಡೆಮಿ ಪರೀಕ್ಷೆಗೆ ಪ.ಜಾ, ಪ.ಪಂ, ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದ್ದು, ಇತರ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕ ತುಂಬಬೇಕು.

ಕಂಬೈನ್ಡ್​​ ಡಿಫೆನ್ಸ್​ ಸರ್ವೀಸ್​ ಪರೀಕ್ಷೆಗೆ ಪ.ಜಾ, ಪ.ಪಂ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ ನೀಡಲಾಗಿದ್ದು, ಇತರ ಅಭ್ಯರ್ಥಿಗಳಿಗೆ 200 ರೂ. ಅರ್ಜಿ ಶುಲ್ಕ ನಿಗದಿಸಲಾಗಿದೆ.

ಆಯ್ಕೆ ಪ್ರಕ್ರಿಯೆ: ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ, ಬೌದ್ಧಿಕ ಮತ್ತು ವ್ಯಕ್ತಿತ್ವ ಪರೀಕ್ಷೆ, ಪೈಲಟ್​ ಆಪ್ಟಿಟ್ಯೂಡ್​​ ಪರೀಕ್ಷೆ ಜೊತೆಗೆ ಸಂದರ್ಶನ ಇರುತ್ತದೆ.

ಈ ಹುದ್ದೆಗೆ ಮೇ 15 ರಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜೂನ್​ 4 ಆಗಿದೆ. ಅರ್ಜಿ ಪರಿಷ್ಕರಣೆಗೆ ಜೂನ್​ 5 ರಿಂದ 11ರ ವರೆಗೆ ಅವಕಾಶ ಇದೆ. ಸೆಪ್ಟೆಂಬರ್​ 1ರಂದು ಪರೀಕ್ಷೆ ನಡೆಯಲಿದೆ.

ಈ ಹುದ್ದೆ ಕುರಿತು ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಆಕಾಂಕ್ಷಿಗಳು upsc.gov.in ಇಲ್ಲಿಗೆ ಭೇಟಿ ನೀಡಬಹುದಾಗಿದೆ.

ಹೆಚ್ಚಿನ ಸುದ್ದಿ