Sunday, July 7, 2024
Homeಕ್ರೈಂVIRAL : ಪುಟಾಣಿ ಮಗುವಿಗೆ ಸಿಗರೇಟು , ಮದ್ಯ ಸೇವನೆ ಮಾಡಿಸಿದ ಮಹಾತಾಯಿ!

VIRAL : ಪುಟಾಣಿ ಮಗುವಿಗೆ ಸಿಗರೇಟು , ಮದ್ಯ ಸೇವನೆ ಮಾಡಿಸಿದ ಮಹಾತಾಯಿ!

ಅಸ್ಸಾಂ : 20 ತಿಂಗಳ ಮಗುವಿಗೆ ಸ್ವತಃ ಹೆತ್ತ ತಾಯಿಯೇ ಸಿಗರೇಟು ಹಾಗೂ ಮದ್ಯಸೇವನೆ ಮಾಡಿಸಿರುವ ದಾರುಣ ಘಟನೆ ಅಸ್ಸಾಂನ ಸಿಲ್ಚರ್‌ ಪ್ರದೇಶದಲ್ಲಿ ನಡೆದಿದೆ. ಈ ಘಟನೆಯ ಬಗ್ಗೆ ನೆರೆಮನೆಯವರು ದೂರು ನೀಡಿದ್ದು, ಕೂಡಲೇ ಶಿಶು ಕಲ್ಯಾಣ ಇಲಾಖೆಯ ಅಧಿಕಾರಿಗಳು ಧಾವಿಸಿ ತಾಯಿಯನ್ನು ಬಂಧನಕ್ಕೊಳಪಡಿಸಿದ್ದಾರೆ.

ಸಧ್ಯಕ್ಕೆ ಮಗುವನ್ನೂ ಸಹ ತಾಯಿಯ ಸುಪರ್ದಿಯಲ್ಲೇ ಇರಿಲಾಗಿದ್ದು, ತಾಯಿ ಯಾವ ಕಾರಣಕ್ಕೆ ಈ ರೀತಿ ಮಾಡಿದ್ದಾಳೆಂದು ತಿಳಿದುಬಂದಿಲ್ಲ.

ಈ ಘಟನೆ ಮೂರ್ನಾಲ್ಕು ದಿನಗಳ ಹಿಂದೆ ನಡೆದಿದೆ ಎನ್ನಲಾಗಿದ್ದು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಕೂಡಲೇ ಪೊಲೀಸ್‌ ಇಲಾಖೆ ಮತ್ತು ಶಿಶು ಕಲ್ಯಾಣ ಇಲಾಖೆಯ ಅಧಿಕಾರಿಗಳು ಮಗುವಿನ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದರು.

ತಾಯಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಕೂಡಲೇ ಅವಳನ್ನು ಬಂಧಿಸಬೇಕು. ಮಗುವನ್ನು ಯಾವುದಾದರೂ ಉತ್ತಮ ಕುಟುಂಬಕ್ಕೆ ದತ್ತು ನೀಡಬೇಕು ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಹೆಚ್ಚಿನ ಸುದ್ದಿ