Sunday, July 7, 2024
Homeಲೈಫ್ ಸ್ಟೈಲ್Monsoon Health Tips: ಮಳೆಗಾಲದಲ್ಲಿ ಕಾಡುವ ಚರ್ಮದ ಸೋಂಕುಗಳ ಸಮಸ್ಯೆಗೆ ಇಲ್ಲಿದೆ ಸಿಂಪಲ್ ಟಿಪ್ಸ್

Monsoon Health Tips: ಮಳೆಗಾಲದಲ್ಲಿ ಕಾಡುವ ಚರ್ಮದ ಸೋಂಕುಗಳ ಸಮಸ್ಯೆಗೆ ಇಲ್ಲಿದೆ ಸಿಂಪಲ್ ಟಿಪ್ಸ್

ಮಳೆಗಾಲ ಎಷ್ಟು ಹಿತಕರವೋ ಅಷ್ಟೇ ಕಷ್ಟಕರ. ಈ ಮಳೆಗಾಲದಲ್ಲಿ ಕಾಡುವ ಆರೋಗ್ಯ ಸಮಸ್ಯೆಗಳು ಒಂದೆರಡಲ್ಲ. ಕೆಮ್ಮು , ಶೀತ, ಸೊಳ್ಳೆಗಳಿಂದ ಹರಡುವ ಕಾಯಿಲೆಯು ಒಂದೆಡೆಯಾದರೆ ಚರ್ಮದ ಸಮಸ್ಯೆಯು ಇನ್ನೊಂದೆಡೆ. ಅದರಲ್ಲಿಯು ಕಾಲು -ಕೈ ಬೆರಳುಗಳ ನಡುವೆ ಕಾಣಿಸಿಕೊಳ್ಳುವ ತುರಿಕೆಯಂತಹ ಸಮಸ್ಯೆಯು ಜೀವ ಹಿಂಡುತ್ತವೆ. ಹೀಗಾದಾಗ ಮನೆ ಮದ್ದಿನ ಮೂಲಕ ಪಾದಗಳ ನಡುವಿನ ತುರಿಕೆಯಂತಹ ಸಮಸ್ಯೆಗಳನ್ನು ದೂರವಾಗಿಸಬಹುದು.

* ಅರಶಿನದಲ್ಲಿ ಆಂಟಿ ಬ್ಯಾಕ್ಟಿರಿಯಾ ಗುಣ ಇರುವುದರಿಂದ ಅರಿಶಿನಕ್ಕೆ ತೆಂಗಿನೆಣ್ಣೆ ಬೆರೆಸಿ ತಯಾರಿಸಿದ ಪೇಸ್ಟ್ ಅನ್ನು ಹಿಮ್ಮಡಿಗೆ ಮತ್ತು ಬೆರಳುಗಳ ಮಧ್ಯಕ್ಕೆ ಹಚ್ಚುತ್ತಿದ್ದರೆ ಕಾಲಿನ ನಂಜು ಕಡಿಮೆಯಾಗುತ್ತದೆ.

* ಮೆಹಂದಿ ಗಿಡದ ಎಲೆಗಳನ್ನು ಚೆನ್ನಾಗಿ ತೊಳೆದು ರುಬ್ಬಿ ಪೇಸ್ಟ್ ಮಾಡಿ ಕಾಲು ಬೆರಳುಗಳ ಮಧ್ಯೆ ಮತ್ತು ಪಾದದ ಸುತ್ತ ಹಚ್ಚಿಕೊಳ್ಳಿ. ಒಣಗಿದ ಬಳಿಕ ತಣ್ಣೀರಿನಿಂದ ತೊಳೆಯುತ್ತ ಬಂದರೆ ಗುಣಮುಖ ಕಾಣುತ್ತದೆ.

* ಕಾಲಿನ ನಂಜಿನ ಸಮಸ್ಯೆಗೆ ನಿಂಬೆರಸ, ಈರುಳ್ಳಿ ರಸ, ಬೆಣ್ಣೆಯೂ ಉತ್ತಮ ಔಷಧಿಯಾಗಿದೆ. ಇದರಲ್ಲಿ ಯಾವುದದನ್ನಾದರೂ ರಾತ್ರಿ ಹಚ್ಚಿ ಬೆಳಗ್ಗೆ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದರೆ ತುರಿಕೆಯು ಕಡಿಮೆಯಾಗುತ್ತದೆ.

* ಅಡುಗೆ ಮನೆಯಲ್ಲಿರುವ ವಿನೆಗರ್ ಬಳಸುವುದರಿಂದ ಚರ್ಮದ ಬಹುತೇಕ ಕಾಯಿಲೆಗಳು ಗುಣಮುಖವಾಗುತ್ತವೆ. ಅದರಲ್ಲೂ ಕಾಲಿನಲ್ಲಾದ ಫಂಗಲ್ ಇನ್ಫೆಕ್ಷನ್ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಬೆಚ್ಚಗಿನ ನೀರಿನಲ್ಲಿ ವಿನೆಗರ್ ಮಿಶ್ರಣ ಮಾಡಿ ಕಾಲನ್ನು ನೆನೆಸಿಡುವುದರಿಂದ ಈ ಸಮಸ್ಯೆಯು ದೂರವಾಗುತ್ತದೆ.

* ಒಂದು ಚಮಚದಷ್ಟು ಆಲಿವ್ ಎಣ್ಣೆಯನ್ನು ಹತ್ತಿಯುಂಡೆಯ ಸಹಾಯದಿಂದ ಸೋಂಕಿಗೆ ಕಾಲಿನ ಬೆರಳಿನ ಸಂದಿಗಳಿಗೆ ಹಚ್ಚುತ್ತ ಬಂದರೆ ಸೋಂಕು ನಿಧಾನವಾಗಿ ದೂರವಾಗುತ್ತದೆ.

ಈ ಮನೆಮದ್ದನ್ನೊಮ್ಮೆ ಪ್ರಯತ್ನಿಸುವ ಮುನ್ನ ವೈದ್ಯರ ಸಲಹೆಗಳನ್ನು ಪಡೆದುಕೊಳ್ಳುವುದು ಉತ್ತಮ.

ಹೆಚ್ಚಿನ ಸುದ್ದಿ