Sunday, July 7, 2024
Homeಟಾಪ್ ನ್ಯೂಸ್Meta: ಭಾರತದ ಫೇಸ್ ಬುಕ್ ಬಳಕೆದಾರರಿಗೆ ಎಐ ಅಸಿಸ್ಟೆಂಟ್!

Meta: ಭಾರತದ ಫೇಸ್ ಬುಕ್ ಬಳಕೆದಾರರಿಗೆ ಎಐ ಅಸಿಸ್ಟೆಂಟ್!

ನವದೆಹಲಿ: ಟೆಕ್ ದೈತ್ಯ ಗೂಗಲ್ ಭಾರತದಲ್ಲಿ ತನ್ನ ಜೆನ್‌ ಎಐ ಚಾಟ್‌ಬಾಟ್ ಜೆಮಿನಿ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದ ಬೆನ್ನಲ್ಲೇ ಇದೀಗ ಫೇಸ್‌ಬುಕ್‌ನ ಮಾತೃ ಕಂಪನಿ ಮೆಟಾ ಕೂಡಾ ಭಾರತೀಯ ಬಳಕೆದಾರರಿಗಾಗಿ ತನ್ನ ಹೊಸ ಎಐ ಅಸಿಸ್ಟೆಂಟ್‌ ಅನ್ನು ತರಲು ಮುಂದಾಗಿದೆ.

ಹೌದು, ಮೆಟಾದ ಎಐ ಅಸಿಸ್ಟೆಂಟ್‌ ಅನ್ನು ಬಳಸಿಕೊಂಡು ವಾಟ್ಸಪ್‌, ಫೇಸ್‌ಬುಕ್‌ ಮೆಸೆಂಜರ್‌ ಹಾಗೂ ಇನ್ಸ್ಟಾಗ್ರಾಂ ಬಳಕೆದಾರರು ಹುಡುಕಾಟ, ನೆರವು, ಮಾಹಿತಿ ಸೇರಿದಂತೆ ಇತರ ಫೀಚರ್‌ಗಳನ್ನು ಸದುಪಯೋಗಪಡಿಸಿಕೊಳ್ಳಬಹುದು ಎಂದು ಕಂಪನಿ ತಿಳಿಸಿದೆ.

ಜಾಗತಿಕವಾಗಿ ಬಳಕೆದಾರರಿಗಾಗಿ ಮೆಟಾ ಎಐ ಅಸಿಸ್ಟೆಂಟ್‌ ಅನ್ನು ಹೊರತಂದಿದ್ದು, ಗೂಗಲ್‌ನ ಜೆಮಿನಿ, ಮೈಕ್ರೋಸಾಫ್ಟ್‌ನ ಕಾಪಿಲೋಟ್, ಅಮೆಜಾನ್‌ನ ಅಲೆಕ್ಸಾ, ಓಪನ್‌ ಎಐ ಒಡೆತನದ ಚಾಟ್‌ ಜಿಪಿಟಿ ಸೇರಿದಂತೆ ಸಾಕಷ್ಟು ವಿವಿಧ ಎಐ ಅಸಿಸ್ಟೆಂಟ್‌ಗಳನ್ನು ಪರಿಚಯಿಸಿದ ಪ್ರಸಿದ್ಧ ಜಾಗತಿಕ ಟೆಕ್ ದೈತ್ಯಗಳ ಪಟ್ಟಿಯಲ್ಲಿ ಇದು ಕೂಡಾ ಸೇರಿಕೊಳ್ಳುತ್ತಿದೆ.

ಕಂಪನಿಯು ಏಪ್ರಿಲ್‌ ನಿಂದ ಹಲವು ದೇಶಗಳಲ್ಲಿ ಇಂಗ್ಲಿಷ್‌ನಲ್ಲಿ ಮೆಟಾ ಎಐ ಅನ್ನು ಹೊರತಂದಿದೆ. ಮೆಟಾ ಇದುವರೆಗೆ ಆಸ್ಟ್ರೇಲಿಯಾ, ಕೆನಡಾ, ಘಾನಾ, ಜಮೈಕಾ, ಮಲಾವಿ, ನ್ಯೂಜಿಲೆಂಡ್, ನೈಜೀರಿಯಾ, ಪಾಕಿಸ್ತಾನ, ಸಿಂಗಾಪುರ್, ದಕ್ಷಿಣ ಆಫ್ರಿಕಾ, ಉಗಾಂಡಾ, ಜಾಂಬಿಯಾ ಮತ್ತು ಜಿಂಬಾಬ್ವೆಯಲ್ಲಿ ತನ್ನ ಎಐ ಅಸಿಸ್ಟೆಂಟ್‌ ಅನ್ನು ಈಗಾಗಲೇ ಪರಿಚಯಿಸಿದೆ.

ಹೆಚ್ಚಿನ ಸುದ್ದಿ