Sunday, July 7, 2024
Homeಲೈಫ್ ಸ್ಟೈಲ್JOB ALERT: ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ವಿವಿಧ ಹುದ್ದೆಗಳ ನೇಮಕ; ಅರ್ಜಿ ಆಹ್ವಾನ

JOB ALERT: ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ವಿವಿಧ ಹುದ್ದೆಗಳ ನೇಮಕ; ಅರ್ಜಿ ಆಹ್ವಾನ

ಬೆಂಗಳೂರು: ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ ರಾಜ್ಯ ಸರ್ಕಾರದ ಅಧೀನದ ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದಲ್ಲಿ ಖಾಲಿ ಇರುವ 168 ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಕೆಗೆ ನಾಳೆ ಅಂತಿಮ ದಿನವಾಗಿದೆ. ಮಾರ್ಚ್​ 19ರಿಂದ ಅಧಿಸೂಚನೆ ಹೊರಡಿಸಿದ್ದ ಹುದ್ದೆಗೆ ಈ ಹಿಂದೆ ಮೇ 3 ಅಂತಿಮ ದಿನವಾಗಿತ್ತು. ಬಳಿಕ ಈ ಹುದ್ದೆ ವಿಸ್ತರಣೆ ನಡೆಸಲಾಗಿದ್ದು, ಅರ್ಜಿ ಸಲ್ಲಿಕೆಗೆ ಅಂತಿಮ ದಿನ ಮೇ 30 ಆಗಿದೆ.

ಹುದ್ದೆ ವಿವರ:

  • ಸಹಾಯಕ ಫೋರ್ಮೆನ್​ (ಗಣಿ) – 16
  • ಸಹಾಯಕ ಫೋರ್ಮೆನ್ (ಲೋಹ ಶಾಸ್ತ್ರ) -7
  • ಲ್ಯಾಬ್​ ಸಹಾಯಕ- 1
  • ಸಹಾಯಕ ಫೋರ್ಮೆನ್​ (ಭೂ- ಗರ್ಭಶಾಸ್ತ್ರ) – 3
  • ಸಹಾಯಕ ಫೋರ್ಮೆನ್​ (ಡೈಮಂಡ್​ ಡ್ರಿಲ್ಲಿಂಗ್​​) -2
  • ಸಹಾಯಕ ಫೋರ್ಮೆನ್​​ (ಮೆಕಾನಿಕಲ್​) – 19
  • ಐಟಿಐ ಫಿಟ್ಟರ್​ ದರ್ಜೆ 2 (ಗಣಿ ವಿಭಾಗ)- 56
  • ಐಟಿಐ ಫಿಟ್ಟರ್​ ದರ್ಜೆ 2 (ಲೋಹ ವಿಭಾಗ) – 4
  • ಐಟಿಐ ಎಲೆಕ್ಟ್ರಿಕಲ್​ ದರ್ಜೆ 2 (ತಾಂತ್ರಿಕ ವಿಭಾಗ) -4
  • ಸಹಾಯಕ ಫೋರ್ಮೆನ್​​ (ಸಿವಿಲ್​) – 1
  • ಸಹಾಯಕ ಫೋರ್ಮೆನ್​ (ಎಲೆಕ್ಟ್ರಿಕಲ್ ) 1
  • ಸೆಕ್ಯೂರಿಟಿ ಇನ್ಸ್​ಪೆಕ್ಟರ್​​ – 6
  • ಐಟಿಐ ಫಿಟ್ಟರ್ (ಸರ್ವೆ) -2
  • ಸೆಕ್ಯೂರಿಟಿ ಗಾರ್ಡ್​​ – 24

ವಿದ್ಯಾರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಪ್ಲೊಮಾ, ಬಿಎಸ್ಸಿ, ಐಟಿಐ, ಪದವಿ, 12ನೇ ತರಗತಿ ವಿದ್ಯಾರ್ಹತೆ ಹೊಂದಿರಬೇಕು.

ವಯೋಮಿತಿ: ಅರ್ಜಿ ಸಲ್ಲಿಸುವ ಗರಿಷ್ಠ ವಯೋಮಿತಿ 35 ವರ್ಷ. ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಪ. ಜಾ, ಪ.ಪಂ, ಪ್ರವರ್ಗ 1, ನಿವೃತ್ತ ಸೇವಾ ನೌಕರರು, ವಿಕಲ ಚೇತನ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕು ಮತ್ತು ಪ್ರವರ್ಗ 2ಎ. 2ಬಿ, 3ಎ, 3 ಬಿ ಅಭ್ಯರ್ಥಿಗಳಿಗೆ 300 ರೂ. ಹಾಗೂ ಸಾಮಾನ್ಯ ಅಭ್ಯರ್ಥಿಗಳಿಗೆ 600 ರೂ. ಅರ್ಜಿ ಶುಲ್ಕ ವಿಧಿಸಲಾಗಿದೆ.

ಆಯ್ಕೆ ಪ್ರಕ್ರಿಯೆ: ಈ ಹುದ್ದೆಗೆ ಕಂಪ್ಯೂಟರ್​ ಆಧಾರಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಮೇ 30 ಆಗಿದೆ.

ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ huttigold.karnataka.gov.in ಇಲ್ಲಿಗೆ ಭೇಟಿ ನೀಡಿ.

ಹೆಚ್ಚಿನ ಸುದ್ದಿ