Sunday, July 7, 2024
Homeಟಾಪ್ ನ್ಯೂಸ್DATING APP SCAM: ಎಚ್ಚರ! ಡೇಟಿಂಗ್‌ ಆಪ್ ಬಳಸುತ್ತೀರಾ.. ಹಾಗಾದ್ರೆ ಈ ಸುದ್ದಿ ಓದಿ...

DATING APP SCAM: ಎಚ್ಚರ! ಡೇಟಿಂಗ್‌ ಆಪ್ ಬಳಸುತ್ತೀರಾ.. ಹಾಗಾದ್ರೆ ಈ ಸುದ್ದಿ ಓದಿ…

ನವದೆಹಲಿ: ಡೇಟಿಂಗ್ ಆ್ಯಪ್‌ನಲ್ಲಿ (Dating App) ಭೇಟಿಯಾದ ಮಹಿಳೆಯೊಂದಿಗೆ ಡೇಟ್‌ಗಾಗಿ ಕೆಫೆ ಹೋಗಿದ್ದ ವೇಳೆ 1.20 ಲಕ್ಷ ರೂ. ಬಿಲ್‌ ಆದ ಘಟನೆ ದೆಹಲಿಯಲ್ಲಿ (Delhi) ನಡೆದಿದೆ.

ಡೇಟಿಂಗ್‌ ಆಪ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಹಲವು ಹಗರಣಗಳು ನಡೆಯುತ್ತಿವೆ. ಕೆಲವು ಪ್ರಕರಣಗಳು ಹೊರಬಂದಿದ್ದು, ಇನ್ನೂ ಕೆಲವು ಪ್ರಕರಣಗಳು ಕುಟುಂಬಕ್ಕೆ ಹೆದರಿ ಮುಚ್ಚಿಹೋಗಿರುವುದು ಇದೆ. ಮಹಿಳೆಯೊಂದಿಗೆ ಸಂತ್ರಸ್ತರು ಟಿಂಡರ್, ಬಂಬಲ್, ಹಿಂಜ್ ಮತ್ತು OKCupid ನಂತಹ ಡೇಟಿಂಗ್ ಅಪ್ಲಿಕೇಶನ್‌ನ ಮೂಲಕ ಮೊದಲ ಬಾರಿಗೆ ಭೇಟಿ ಆಗುತ್ತಾರೆ.

ನಂತರದ ದಿನಗಳಲ್ಲಿ ಮಹಿಳೆಯು ಡೇಟಿಂಗ್‌ಗಾಗಿ ವ್ಯಕ್ತಿಯನ್ನು ಕರೆಯುತ್ತಾರೆ. ಈ ವೇಳೆ ಮಹಿಳೆಯು ಒಂದು ನಿರ್ದಿಷ್ಟ ಪ್ರದೇಶದಲ್ಲಿ ಭೇಟಿಯಾಗಬೇಕೆಂದು ಒತ್ತಾಯಿಸಿ ಅನೇಕ ಕೆಫೆಗಳು ಮತ್ತು ಪಬ್‌ಗಳಿಗೆ ಕರೆಯುತ್ತಾರೆ. ಈ ವೇಳೆ ಸಂತ್ರಸ್ತ ಮಹಿಳೆ ಕರೆದ್ದಲ್ಲಿಗೆ ಹೋದಾಗ ಮಹಿಳೆ ಮೆನುನಲ್ಲಿ ಇಲ್ಲದ್ದನ್ನು ಆರ್ಡರ್‌ ಮಾಡುತ್ತಾಳೆ. ಅದಾದ ಬಳಿಕ ಮಹಿಳೆ ತುರ್ತು ಕೆಲಸವಿದೆ ಎಂದು ಆ ಸ್ಥಳದಿಂದ ಜಾಗ ಖಾಲಿ ಮಾಡುತ್ತಾಳೆ.

ಈ ವೇಳೆ ಮೋಸದ ಅರಿವಿಲ್ಲದ ಸಂತ್ರಸ್ತನಿಗೆ ಹೋಟೆಲ್‌ನವರು ಅಂದಾಜಿಗಿಂತಲೂ ಹೆಚ್ಚು ಬಿಲ್‌ ಹಾಕಿ ಶಾಕ್‌ ನೀಡುತ್ತಾರೆ. ಆ ವೇಳೆ ಸಂತ್ರಸ್ತ ಪ್ರತಿಭಟಿಸಿದರೇ ಪ್ರತಿಭಟಿಸಿದಾಗ ಕೆಫೆ ಸಿಬ್ಬಂದಿ ಅಥವಾ ಬೌನ್ಸರ್‌ಗಳಿಂದ ಬೆದರಿಕೆ ಹಾಕುತ್ತಾರೆ. ಅದರಿಂದ ಬೇರೆ ವಿಧಿಯಿಲ್ಲದೇ ಸಂತ್ರಸ್ತ ಹಣವನ್ನು ಪಾವತಿಸುತ್ತಾನೆ.

ಈ ಹಣದಲ್ಲಿ ಶೇ. 50 ರಷ್ಟು ಹಣ ಮಹಿಳೆಗೆ ಹೋದರೆ ಇನ್ನುಳಿದ ಹಣ ಹೋಟೆಲ್‌ನವರಿಗೆ ಸೇರುತ್ತದೆ. ಹೆಚ್ಚಿನ ಜನರು ಪೊಲೀಸರನ್ನು ಸಂಪರ್ಕಿಸುವುದಿಲ್ಲ ಏಕೆಂದರೆ ಅವರು ಡೇಟಿಂಗ್ ಅಪ್ಲಿಕೇಶನ್ ಮೂಲಕ ಜನರನ್ನು ಭೇಟಿಯಾಗುತ್ತಿದ್ದಾರೆ ಎಂದು ತನಿಖೆಯು ಅವರ ಕುಟುಂಬಕ್ಕೆ ಬಹಿರಂಗಪಡಿಸಬಹುದು.

ಹೆಚ್ಚಿನ ಸುದ್ದಿ