Sunday, July 7, 2024
Homeಲೈಫ್ ಸ್ಟೈಲ್Evening Snacks: ಚಹಾದ ರುಚಿಯನ್ನು ಹೆಚ್ಚಿಸುತ್ತೆ ಈ ಡಿಫೆರೆಂಟ್ ಟೇಸ್ಟ್ ಮಾವಿನಕಾಯಿ ಬಜ್ಜಿ; ಇಲ್ಲಿದೆ ರೆಸಿಪಿ

Evening Snacks: ಚಹಾದ ರುಚಿಯನ್ನು ಹೆಚ್ಚಿಸುತ್ತೆ ಈ ಡಿಫೆರೆಂಟ್ ಟೇಸ್ಟ್ ಮಾವಿನಕಾಯಿ ಬಜ್ಜಿ; ಇಲ್ಲಿದೆ ರೆಸಿಪಿ

ಹಣ್ಣುಗಳ ರಾಜನೆಂದೇ ಪ್ರಸಿದ್ಧಿ ಪಡೆದಿರುವ ಮಾವು ಈಗ ಮಾರುಕಟ್ಟೆಯಲ್ಲಿ ತನ್ನದೇ ಆದ ಚಾಪು ಮೂಡಿಸುತ್ತಿವೆ. ಒಂದೆಡೆ ಉರಿ ಬಿಸಿಲು, ಮತ್ತೊಂದೆಡೆ ಚುನಾವಣೆ ಕಾವು ಇದರ ನಡುವೆ ಮಾವಿನಹಣ್ಣುಗಳದ್ದೇ ಕಾರುಬಾರು. ಮಾವಿನ ಹಣ್ಣು ತಿನ್ನಲು ಬಹಳ ರುಚಿ ಹಾಗೇ ಇದರಿಂದ ಮಾಡುವ ಬಗೆಬಗೆಯ ಖಾದ್ಯಗಳು ಕೂಡ ಅಷ್ಟೇ ರುಚಿಕರ.

ಜನರು ಸಾಮಾನ್ಯವಾಗಿ ಹಲವಾರು ಬಗೆಯ ಬಜ್ಜಿಗಳನ್ನು (ಪೋಡಿ) ತಿಂದಿರಬಹುದು. ಉದಾಃ ಕ್ಯಾಪ್ಸಿಕಂ ಬಜ್ಜಿ, ಬಟಾಟೆ ಬಜ್ಜಿ, ಬಾಳೇಕಾಯಿ ಬಜ್ಜಿ, ಬದನೆಕಾಯಿ ಬಜ್ಜಿ, ಹೀಗೆ ಹೇಳ್ತಾ ಹೋದರೆ ಒಂದು ದೊಡ್ಡ ಪಟ್ಟಿಯೇ ಮಾಡಬಹುದು. ಹಾಗೆಯೇ ಮಾವಿನ ಕಾಯಿಯಿಂದ ಕೂಡ ಹಲವು ಬಗೆಯ ತಿಂಡಿ-ತಿನಿಸುಗಳನ್ನು ತಯಾರಿಸುತ್ತಾರೆ.

ಬನ್ನಿ ನಾವಿಂದು ನಿಮಗಾಗಿ ವಿಭಿನ್ನ ಟೇಸ್ಟ್‌ನ “ಮಾವಿನ ಕಾಯಿಯ ಬಜ್ಜಿ”ಯನ್ನು ಹೇಗೆ ಮಾಡುವುದು ಎಂಬುವುದರ ಬಗ್ಗೆ ಹೇಳಿಕೊಡುತ್ತೇವೆ ಇದನ್ನು ನೀವು ಮನೆಯಲ್ಲಿಯೇ ಸುಲಭವಾಗಿ ಮಾಡಿ ಸವಿಯಬಹುದು.

ಬೇಕಾಗುವ ಸಾಮಗ್ರಿಗಳು
ಮಾವಿನ ಕಾಯಿ-2, ಕಡ್ಲೆಹಿಟ್ಟು-1ಕಪ್‌, ಅರಶಿನ ಪುಡಿ-ಸ್ವಲ್ಪ, ಶುಂಠಿ-ಬೆಳ್ಳುಳ್ಳಿ ಪೇಸ್ಟ್‌-1ಚಮಚ, ಮೆಣಸಿನ ಪುಡಿ-2ಚಮಚ, ಅಡುಗೆ ಸೋಡಾ-1 ಚಿಟಿಕೆ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.

ತಯಾರಿಸುವ ವಿಧಾನ
ಮೊದಲಿಗೆ ಮಾವಿನ ಕಾಯಿಯನ್ನು ಚೆನ್ನಾಗಿ ತೊಳೆದು ನಿಮಗೆ ಬೇಕಾಗುವ ರೀತಿಯಲ್ಲಿ ಕಟ್‌ ಮಾಡಿಕೊಳ್ಳಿ. ನಂತರ ಒಂದು ಬೌಲ್‌ಗೆ ಕಡ್ಲೆಹಿಟ್ಟು,ಅಡುಗೆ ಸೋಡಾ, ಮೆಣಸಿನ ಪುಡಿ,ಅರಶಿನ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸ್ವಲ್ಪ ನೀರನ್ನು ಸೇರಿಸಿ ಹಿಟ್ಟನ್ನು ಚೆನ್ನಾಗಿ ಕಲಸಿಕೊಳ್ಳಿ.

ಆಮೇಲೆ ಒಂದು ಬಾಣಲೆಯಲ್ಲಿ ಕರಿಯಲು ಬೇಕಾಗುವಷ್ಟು ಎಣ್ಣೆ ಹಾಕಿ ಬಿಸಿ ಮಾಡಿ ಅದು ಬಿಸಿಯಾದ ಮೇಲೆ ಹೆಚ್ಚಿಟ್ಟುಕೊಂಡ ಮಾವಿನಕಾಯಿಯನ್ನು ಮಾಡಿಟ್ಟ ಹಿಟ್ಟಿನ ಮಿಶ್ರಣಕ್ಕೆ ಮುಳುಗಿಸಿ ಎಣ್ಣೆಗೆ ಹಾಕಿ ಎರಡೂ ಬದಿಯನ್ನು ಚೆನ್ನಾಗಿ ಬೇಯಿಸಿರಿ. ಬಿಸಿ-ಬಿಸಿಯಾದ ಮಾವಿನ ಕಾಯಿ ಬಜ್ಜಿ/ಪೋಡಿ ಪುದೀನಾ ಚಟ್ನಿಯೊಂದಿಗೆ ಸವಿಯಿರಿ.

ಹೆಚ್ಚಿನ ಸುದ್ದಿ