Sunday, July 7, 2024
Homeಟಾಪ್ ನ್ಯೂಸ್VIRAL VIDEO: ಓ ಮೋದಿಜೀ... ನಮ್ಮ ಹಳ್ಳಿಗೆ ರಸ್ತೆ ಮಾಡಿಕೊಡಿ: ವಿಶಿಷ್ಟ ರೀತಿಯಲ್ಲಿ ಮನವಿ ಮಾಡಿದ...

VIRAL VIDEO: ಓ ಮೋದಿಜೀ… ನಮ್ಮ ಹಳ್ಳಿಗೆ ರಸ್ತೆ ಮಾಡಿಕೊಡಿ: ವಿಶಿಷ್ಟ ರೀತಿಯಲ್ಲಿ ಮನವಿ ಮಾಡಿದ ಮಹಿಳೆ -VIDEO

ಭೋಪಾಲ್‌: ಓ ಮೋದಿಜೀ… ನಮ್ಮ ಮಧ್ಯಪ್ರದೇಶದಲ್ಲಿ (Madhya Pradesh) ಎಲ್ಲಾ ಸೀಟುಗಳನ್ನು ಗೆಲ್ಲಿಸಿಕೊಟ್ಟಿದ್ದೇವೆ, ನಮ್ಮ ಹಳ್ಳಿಗೆ ರಸ್ತೆಯನ್ನು ಮಾಡಿಕೊಡಿ ಎಂದು ಪ್ರಧಾನಿ ನರೇಂದ್ರ ಮೋದಿಗೆ (Narendra Modi) ಮಹಿಳೆ ವಿಶಿಷ್ಟ ರೀತಿಯಲ್ಲಿ ಮನವಿ ಮಾಡಿದ್ದಾರೆ.

ಮಧ್ಯಪ್ರದೇಶದ ಸಿಧಿಯ ಶಿವಾನಿ ಸಾಹು ಎಂಬ ಮಹಿಳೆ ಪ್ರಧಾನಿ ನರೇಂದ್ರ ಮೋದಿ ಬಳಿ ಮನವಿ ಮಾಡಿದ್ದಾರೆ. ಮಹಿಳೆಯು ಮನವಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.

ವಿಡಿಯೋದಲ್ಲಿ ಏನಿದೆ?
ಓ, ಮೋದಿ ಜೀ! ನಾವು ನಿಮ್ಮನ್ನು ಮಧ್ಯಪ್ರದೇಶದ ಎಲ್ಲಾ 29 ಸೀಟುಗಳನ್ನು ಗೆಲ್ಲಿಸಿದ್ದೇವೆ. ಅದಕ್ಕಾಗಿ ನಮ್ಮ ಹಳ್ಳಿಯ ರಸ್ತೆಯನ್ನು ನಿರ್ಮಿಸಿಕೊಡಿ. ನಮ್ಮ ಗ್ರಾಮದ ಜನರು ಸಂಸದರನ್ನು ಭೇಟಿ ಮಾಡಿದ್ದಾರೆ. ಶಾಸಕ, ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾದರೂಮ ಯಾರೂ ಅವರ ಮಾತನ್ನು ಕೇಳುವುದಿಲ್ಲ. ಇಲ್ನೋಡಿ ನಮ್ಮ ರಸ್ತೆಯ ಪರಿಸ್ಥಿತಿಯನ್ನು, ನಮ್ಮ ಹಳ್ಳಿಯ ಹೆಸರು ಖಟ್ಟಿ ಖುರ್ದ್ ಎಂದು ಹೇಳುತ್ತಾರೆ.

ಹೆಚ್ಚಿನ ಸುದ್ದಿ