Sunday, July 7, 2024
Homeಕ್ರೀಡೆVIRAL NEWS: 1971 ರಲ್ಲಿ ಕ್ರಿಕೆಟ್‌ ತಾರೆಯರಿಗೆ ಸಿಕ್ಕ ಬಹುಮಾನವೇನು ಗೊತ್ತೇ- ಒಂದು ಲೂನಾ...

VIRAL NEWS: 1971 ರಲ್ಲಿ ಕ್ರಿಕೆಟ್‌ ತಾರೆಯರಿಗೆ ಸಿಕ್ಕ ಬಹುಮಾನವೇನು ಗೊತ್ತೇ- ಒಂದು ಲೂನಾ ಗಾಡಿ!

ನವದೆಹಲಿ : ಟಿ-20 ವರ್ಲ್ಡ್‌ ಕಪ್‌ ಗೆದ್ದ ಕ್ರಿಕೆಟಿಗರಿಗೆ ಬಿಸಿಸಿಐ 125 ಕೋಟಿ ಬಹುಮಾನ ಘೋಷಿಸಿದ ಬೆನ್ನಲ್ಲೇ ಆಗಿನ ಕಾಲದ ಕ್ರಿಕೆಟಿಗರಿಗೆ ಬಹುಮಾನ ರೂಪದಲ್ಲಿ ದ್ವಿಚಕ್ರ ವಾಹನದ ಜಾಹಿರಾತು ಇದೀಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದಕ್ಕಾಗಿ ಚಂದ್ರಶೇಖರ್ ಮತ್ತು ಫಾರೂಖ್ ಇಂಜಿನಿಯರ್ ಅವರಿಗೆ ಲೂನಾ ವಾಹನವನ್ನು ಬಹುಮಾನವಾಗಿ ನೀಡಲಾಗಿತ್ತು.

1971ರಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಫಾರೂಖ್ ಇಂಜಿನಿಯರ್ 415 ರನ್ ಕಲೆ ಹಾಕಿ ಅತ್ಯುತ್ತಮ ಬ್ಯಾಟ್ಸ್ ಮನ್ ಆಗಿ ಹೊರಹೊಮ್ಮಿದರೆ, ಬಿ.ಚಂದ್ರಶೇಖರ್ 35 ವಿಕೆಟ್ ಪಡೆದು ಶ್ರೇಷ್ಠ ಬೌಲರ್ ಆಗಿ ಹೊರಹೊಮ್ಮಿದರು.

ಟೆಸ್ಟ್ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದಕ್ಕಾಗಿ ಲೂನಾವನ್ನು ಬಹುಮಾನವಾಗಿ ನೀಡಿದ್ದ ಕೆನೆಟಿಕ್ ಕಂಪನಿ ಪತ್ರಿಕೆಗಳಲ್ಲಿ ಜಾಹಿರಾತು ನೀಡಿತ್ತು. ಇದೀಗ ವಿಶ್ವಕಪ್ ಗೆದ್ದ ಭಾರತ ತಂಡದ ಜೊತೆ ಈ ಇಬ್ಬರು ಆಟಗಾರರಿಗೆ ಉಡುಗೊರೆ ಸಿಕ್ಕಿದ್ದನ್ನು ಸ್ಮರಿಸುವ ಮೂಲಕ ಅಭಿಮಾನಿಗಳು ಟ್ರೆಂಡ್ ಸೃಷ್ಟಿಸಿದ್ದಾರೆ.

ಹೆಚ್ಚಿನ ಸುದ್ದಿ