Sunday, July 7, 2024
Homeಚುನಾವಣೆ 2023Loksabha Election result : ರಾಜ್ಯದ ಪ್ರಮುಖ ನಾಯಕರಲ್ಲಿ ಇವರೇ ಮುಂದು - ತುಮಕೂರು ಗೆದ್ದರೇ...

Loksabha Election result : ರಾಜ್ಯದ ಪ್ರಮುಖ ನಾಯಕರಲ್ಲಿ ಇವರೇ ಮುಂದು – ತುಮಕೂರು ಗೆದ್ದರೇ ಸೋಮಣ್ಣ!

ಬೆಂಗಳೂರು : ಲೋಕಸಭಾ ಚುನಾವಣೆಯ ಫಲಿತಾಂಶಕ್ಕಾಗಿ ಮಂಗಳವಾರ ಬೆಳಗಿನಿಂದಲೇ ಮತಎಣಿಕೆ ಪ್ರಾರಂಭವಾಗಿದ್ದು, ಬಿಜೆಪಿ ರಾಜ್ಯದಲ್ಲಿ ಮುನ್ನಡೆ ಸಾಧಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸೋಲನ್ನನುಭವಿಸಿದ್ದ ವಿ. ಸೋಮಣ್ಣ ತುಮಕೂರಿನಲ್ಲಿ ಅಪೂರ್ವ ಮುನ್ನಡೆ ಸಾಧಿಸಿದ್ದಾರೆ.

28 ಕ್ಷೇತ್ರಗಳ ಪೈಕಿ ಜೆಡಿಎಸ್‌ ಮೂರೂ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ 18 ಕ್ಷೇತ್ರಗಳಲ್ಲಿ ಹಾಗೂ ಕಾಂಗ್ರೆಸ್‌ 7 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.

ಎಚ್‌ಡಿ ಕುಮಾರಸ್ವಾಮಿ ಮಂಡ್ಯದಲ್ಲಿ ಸ್ಟಾರ್‌ ಚಂದ್ರು ವಿರುದ್ದ 80 ಸಾವಿರ ಮತಗಳ ಮುನ್ನಡೆ ಸಾಧಿಸಿದ್ದಾರೆ. ಬೆಳಗಾವಿಯಲ್ಲಿ ಜಗದೀಶ್‌ ಶೆಟ್ಟರ್‌, ಹುಬ್ಬಳ್ಳಿಯಲ್ಲಿ ಪ್ರಲ್ಹಾದ್‌ ಜೋಷಿ ಕಾಂಗ್ರೆಸ್‌ ಅಭ್ಯರ್ಥಿಗಳ ವಿರುದ್ದ ಮುನ್ನಡೆ ಸಾಧಿಸಿದ್ದಾರೆ.

ಬೆಳಗಾವಿಯಲ್ಲಿ ಹೆಬ್ಬಾಳ್ಕರ್‌ ಅವರ ಪುತ್ರ ಮೃಣಾಲ್‌ ವಿರುದ್ದ ಜಗದೀಶ್‌ ಶೆಟ್ಟರ್ ಮುನ್ನಡೆಯಲ್ಲಿದ್ದರೆ,  ಬೆಂಗಳೂರು ಗ್ರಾಮಾಂತರದಲ್ಲಿ ಡಾ. ಸಿ.ಎನ್‌ಮಂಜುನಾಥ್‌ ಅವರು ಬೆಳಗಿನಿಂದಲೂ ಕಾಂಗ್ರೆಸ್‌ ನ ಡಿ.ಕೆ. ಸುರೇಶ್ ವಿರುದ್‌ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಹೆಚ್ಚಿನ ಸುದ್ದಿ