Sunday, July 7, 2024
Homeಲೈಫ್ ಸ್ಟೈಲ್Morning Breakfast: ಹಲಸಿನಹಣ್ಣಿನಿಂದ ಮಾಡಿ ಡಿಫ್ರೆಂಟ್‌ ಟೇಸ್ಟ್‌ನ ಇಡ್ಲಿ; ರೆಸಿಪಿ ಇಲ್ಲಿದೆ

Morning Breakfast: ಹಲಸಿನಹಣ್ಣಿನಿಂದ ಮಾಡಿ ಡಿಫ್ರೆಂಟ್‌ ಟೇಸ್ಟ್‌ನ ಇಡ್ಲಿ; ರೆಸಿಪಿ ಇಲ್ಲಿದೆ

ರುಚಿಕರವಾದ ಅಡುಗೆಯನ್ನು ಜೊತೆಗೆ ಹೊಸತೆನೋ ಒಂದನ್ನು ಪ್ರತಿದಿನವು ಪ್ರಯೋಗ ಮಾಡುವುದು ಭೋಜನ ಪ್ರೀಯರಿಗೆ ಹೆಚ್ಚು ಖುಷಿಯನ್ನು ಕೊಡುವ ವಿಚಾರ. ಹಲಸಿನ ಹಣ್ಣುಗಳ ಸಿಗುವ ಸಮಯ ಇದು. ಈ ಹಣ್ಣಿನಿಂದ ಬೇರೆ ಬೇರೆ ರೀತಿಯ ಅಡುಗೆಯನ್ನು ಮಾಡಬಹುದು.

ಆದರೆ ಇಂದು ಹಲಸಿನ ಹಣ್ಣಿನ ಇಡ್ಲಿ ಮಾಡುವುದು ಹೇಗೆ ಎಂದು ತಿಳಿದುಕೊಂಡು ನೀವು ಮನೆಯಲ್ಲಿಯೇ ರುಚಿಯಾಗಿ ಹಲಸಿನ ಹಣ್ಣಿನ ಇಡ್ಲಿ ಮಾಡಿ ಸಿವಿಯಿರಿ.

ಬೇಕಾಗುವ ಸಾಮಗ್ರಿಗಳು:

* ಏಲಕ್ಕಿ – 4-5

* ಅಕ್ಕಿ ರವೆ – 1 ಕಪ್

* ಹಲಸಿನ ಹಣ್ಣು- 2ಕಪ್

* ರಚಿಗೆ ತಕ್ಕಷ್ಟು ಉಪ್ಪು

* ಕೊಬ್ಬರಿ ತುರಿ- ಅರ್ಧ ಕಪ್

* ಬಾಳೆ ಎಲೆ- 4

* ತುಪ್ಪ- ಅರ್ಧ ಕಪ್

* ಬೆಲ್ಲ- 1 ಕಪ್

ಮಾಡುವ ವಿಧಾನ:

* ಹಲಸಿನ ಹಣ್ಣನ್ನು ಚೆನ್ನಾಗಿ ಕಿವುಚಿ ರಸ ತೆಗೆದುಕೊಳ್ಳಬೇಕು. ನಂತರ ಅದಕ್ಕೆ ಸಕ್ಕರೆ ಹಾಕಿ ಕಲಸಿಕೊಳ್ಳಬೇಕು.

* ಬಳಿಕ ಅದಕ್ಕೆ ಉಪ್ಪು, ಏಲಕ್ಕಿ ಪುಡಿ, ತೆಂಗಿನಕಾಯಿ ತುರಿ, ಅಕ್ಕಿರವೆ ಹಾಕಿ ಕಲಸಬೇಕು. ಒಂದು ಗಂಟೆ ಅದನ್ನು ಹಾಗೆ ಇಡಬೇಕು.

* ನಂತರ ಇಡ್ಲಿ ಪಾತ್ರೆಗೆ ಸ್ವಲ್ಪ ನೀರು ಹಾಕಿ ಅದರ ಮೇಲೆ ಒಂದು ತಟ್ಟೆ ಇಟ್ಟು, ಬಾಳೆ ಎಲೆಗೆ ತುಪ್ಪವನ್ನು ಸವರಿ ಸಿದ್ಧಪಡಿಸಿಕೊಂಡ ಹಲಸಿನಕಾಯಿ ಹಿಟ್ಟನ್ನು ಅದರೊಳಗೆ ಹಾಕಿ ಮಡಚಿ ಇಡ್ಲಿ ಪಾತ್ರೆಯಲ್ಲಿ ಹಾಕಿ.

* ಬಳಿಕ ಮುಚ್ಚಳವನ್ನು ಮುಚ್ಚಿ. 25 ನಿಮಿಷ ಬೇಯಿಸಬೇಕು. ನಂತರ ರುಚಿಕರವಾದ ಹಲಸಿನ ಹಣ್ಣಿನ ಇಡ್ಲಿ ಸವಿಯಲು ಸಿದ್ಧವಾಗುತ್ತದೆ.

 

 

ಹೆಚ್ಚಿನ ಸುದ್ದಿ