Sunday, July 7, 2024
Homeಟಾಪ್ ನ್ಯೂಸ್Lalbhag : ಫಲಪುಷ್ಪ ಪ್ರದರ್ಶನಕ್ಕೆ ಈ ಬಾರಿ ಸಂವಿಧಾನ ಶಿಲ್ಪಿ ಥೀಮ್!

Lalbhag : ಫಲಪುಷ್ಪ ಪ್ರದರ್ಶನಕ್ಕೆ ಈ ಬಾರಿ ಸಂವಿಧಾನ ಶಿಲ್ಪಿ ಥೀಮ್!

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಸ್ವಾತಂತ್ರೋತ್ಸವದ ಫಲಪುಷ್ಪ ಪ್ರದರ್ಶನ ಈ ಬಾರಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಥೀಮ್ ನಡಿ ನಡೆಯಲಿದೆ.

ಅಂಬೇಡ್ಕರ್ ಥೀಮ್‌ ಇಟ್ಟುಕೊಂಡು ಫಲಪುಷ್ಪ ಪ್ರದರ್ಶನ ನಡೆಸಲು ರಾಜ್ಯ ತೋಟಗಾರಿಕೆ ಇಲಾಖೆ ತೀರ್ಮಾನಿಸಿದೆ. ಪ್ರದರ್ಶನದಲ್ಲಿ ಸಂವಿಧಾನದ ಕೃತಿ ಅಂಬೇಕರ್‌ ಜೀವನವನ್ನು ಪ್ರತಿಬಿಂಬಿಸುವ ಕಲಾಕೃತಿ. ಬಾಬಾಸಾಹೇಬರ ಮನೆ ಸೇರಿದಂತೆ ಹಲವು ಆಕರ್ಷಣೆಗಳು ಇರಲಿದೆ. ಈ ಥೀಮ್ ಈ ಹಿಂದೆಯೇ ಅನುಷ್ಠಾನಕ್ಕೆ ಬರಬೇಕಿತ್ತು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ ಎಂದಿದ್ದಾರೆ ತೋಟಗಾರಿಕಾ ನಿರ್ದೇಶಕರು

ಪ್ರದರ್ಶನಕ್ಕಾಗಿ ಉದ್ಯಾನ ಸಜ್ಜಾಗುತ್ತಿದ್ದು, ರಸ್ತೆಗಳ ಇಕ್ಕೆಲಗಳಲ್ಲಿ ಗಿಡಗಳಲ್ಲಿ ಹೂಗಳು ಅರಳಿ ನಿಂತಿವೆ. ಓರೆ-ಕೋರೆಯಾಗಿ ಬೆಳೆದ ಗಿಡಗಳನ್ನು ಅಂದಗೊಳಿಸಲಾಗುತ್ತದೆ. ಇಂಡೋ ಅಮೆರಿಕನ್ ಹೈಬ್ರಿಡ್ ಸೀಡ್ಸ್ ಕಂಪನಿಯ ಆಕರ್ಷಕ ಅಲಂಕಾರಿಕ ಜೋಡಣೆ, ಹೂವಿನ ಪಿರಮಿಡ್‌ಗಳು ಗಮನ ಸೆಳೆಯಲಿದೆ. ಗಾಜಿನ ಮನೆಯಲ್ಲಿ ಜೋಡಣೆಗೊಳ್ಳಲಿರುವ ಹೂಗಳು ಬಾಡ ದಂತೆ ವ್ಯವಸ್ಥೆ ಮಾಡಲಾಗಿದೆ.

ಪ್ರದರ್ಶನದಲ್ಲಿ ಆಂಥೋರಿಯಂ, ನಂದಿ ಗಿರಿಧಾಮದ ಇಂಪೇಷನ್ಸ್ ಹೂಗಳು, ರೆಡ್ ಹಾಟ್ ಸ್ಪೂಮೇರಿಯನ್, ಸುಗಂಧ ರಾಜ ಸೇರಿದಂತೆ ಶೀತ ವಲಯದ ಹೂಗಳು ಕಣ್ಮನ ಸೆಳೆಯಲಿವೆ.

ಹೆಚ್ಚಿನ ಸುದ್ದಿ