Sunday, July 7, 2024
Homeಟಾಪ್ ನ್ಯೂಸ್HD KUMARASWAMY : ಸದನದಲ್ಲಿ ಹೇಗೆ ಇರಬೇಕು ಎಂದು ಪ್ರಧಾನಿಯಿಂದ ಕ್ಲಾಸ್ : ಹೆಚ್ ಡಿಕೆ

HD KUMARASWAMY : ಸದನದಲ್ಲಿ ಹೇಗೆ ಇರಬೇಕು ಎಂದು ಪ್ರಧಾನಿಯಿಂದ ಕ್ಲಾಸ್ : ಹೆಚ್ ಡಿಕೆ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಮೂರನೇ ಅವಧಿಗೆ ಅಧಿಕಾರ ವಹಿಸಿಕೊಂಡ ನಂತರ ಸಂಸತ್ತಿನ ಮೊದಲ ಅಧಿವೇಶನದಲ್ಲಿ ಆಡಳಿತ ಪಕ್ಷದ ಸಂಸದರನ್ನು ಒಗ್ಗೂಡಿಸಿ ದೆಹಲಿಯಲ್ಲಿ ಇಂದು ಮಹತ್ವದ ಸಭೆ ನಡೆಸಲಾಗಿದೆ. 

ಈ ಬಗ್ಗೆ  ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮಾತನಾಡಿದ್ದು, ಎಲ್ಲಾ ಸಂಸದರಿಗೆ ಸದನದಲ್ಲಿ ಹಾಜರಾಗಲು ಮತ್ತು ಬಹಳಷ್ಟು ವಿಷಯಗಳನ್ನು ಕಲಿಯಲು ಪ್ರಧಾನಿ ಸಲಹೆ ನೀಡಿದರು ಎಂದರು.  

ಈ ವೇಳೆ ಸದನದಲ್ಲಿ ಯಾವ ರೀತಿ ವರ್ತಿಸಬೇಕು ಮತ್ತು ಯಾವ ರೀತಿ ಆಡಳಿತ ನಡೆಸಬೇಕು ಎಂದು ಪ್ರಧಾನಿ ಮೋದಿ ಎಲ್ಲಾ ಸದಸ್ಯರಿಗೆ ಸಲಹೆಯನ್ನು ನೀಡಿದ್ದಾರೆ ಎಂದು ಹೆಚ್ ಡಿಕೆ ತಿಳಿಸಿದರು. 

ಬಿಜೆಪಿ ಜೊತೆಗಿನ ಮೈತ್ರಿಯೊಂದಿಗೆ ರಾಜ್ಯದಲ್ಲಿ ಚುನಾವಣೆ ಎದುರಿಸಿದ್ದ ಜೆಡಿಎಸ್‌ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಎರಡು ಕಡೆ ಜಯ ಗಳಿಸಿತ್ತು . ಎನ್‌ಡಿಎ ಮೈತ್ರಿಕೂಟ  ಅಧಿಕಾರಕ್ಕೆ ಬಂದ ಬೆನ್ನೆಲ್ಲೇ ಎಚ್‌ಡಿಕೆಗೆ ಸಚಿವ ಸ್ಥಾನವನ್ನೂ ಸಹ  ನೀಡಲಾಗಿತ್ತು. 

ಮುಂಬರುವ ಚುನಾವಣೆಗಳಲ್ಲಿಯೂ ಸಹ ಬಿಜೆಪಿ ಜೊತೆ ಮೈತ್ರಿ ಮುಂದುವರೆಯುವುದಾಗಿ ಹೇಳಿರುವ ಎಚ್‌ಡಿಕೆ, ಇದಕ್ಕೆ ಪೂರ್ವಭಾವಿಯಾಗಿ ಲೋಕಸಭೆಯಲ್ಲಿಯೂ ಸಹ ಬಿಜೆಪಿ ಪರ ಬ್ಯಾಟಿಂಗ್‌ ಆರಂಭಿಸಿದ್ದಾರೆ

ಹೆಚ್ಚಿನ ಸುದ್ದಿ