Sunday, July 7, 2024
Homeಟಾಪ್ ನ್ಯೂಸ್KOO APP : ಇನ್ಮುಂದೆ "ಕೂ" ಸೈಲೆಂಟ್‌!

KOO APP : ಇನ್ಮುಂದೆ “ಕೂ” ಸೈಲೆಂಟ್‌!

ಬೆಂಗಳೂರು: ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಸೋಷಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ “ಕೂ” ಆರಂಭಗೊಂಡು ನಾಲ್ಕು ವರ್ಷಗಳ ಬಳಿಕ ಇದೀಗ ಸ್ಥಗಿತಗೊಂಡಿದೆ.

ಆರಂಭದಲ್ಲಿ ಸೆಲೆಬ್ರಿಟಿಗಳು ಮತ್ತು ಇತರ ಗಣ್ಯರು ಹೆಚ್ಚಾಗಿ ಬಳಸುತ್ತಿದ್ದ ಟ್ವಿಟರ್‌ಗೆ (X ) ಪರ್ಯಾಯ ಸ್ಪರ್ಧಿ ಎಂಬಂತೆ “ಕೂ” ಕಾರ್ಯಾಚರಿಸುವ ಮೂಲಕ ಹೆಚ್ಚಿನ ಗ್ರಾಹಕರನ್ನು ತನ್ನತ್ತ ಸೆಳೆದುಕೊಂಡು ಸೋಷಿಯಲ್‌ ಮೀಡಿಯಾ ವೇದಿಕೆಗಳಲ್ಲಿ ಪ್ರಮುಖ ಸ್ಥಾನ ಪಡೆದಿತ್ತು.

“ನಮ್ಮ ಪಾಲುದಾರಿಕೆ ಮಾತುಕತೆಗಳು ವಿಫಲಗೊಂಡಿದ್ದು, ನಾವು ಸಾರ್ವಜನಿಕರಿಗೆ ನಮ್ಮ ಸೇವೆಯನ್ನು ಮುಂದುವರಿಸಲಾಗುತ್ತಿಲ್ಲ ಎಂದು “ಕೂ” ಸ್ಥಾಪಕರಾದ ಅಪ್ರಮೇಯ ರಾಧಾಕೃಷ್ಣ ಮತ್ತು ಬಿದವಾಟ್ಕ ಅವರು ಹೇಳಿಕೆ ನೀಡಿದ್ದಾರೆ.

ಹೆಚ್ಚಿನ ಸುದ್ದಿ