Sunday, July 7, 2024
Homeಲೈಫ್ ಸ್ಟೈಲ್Job Alert: ಕೊಂಕಣ್​ ರೈಲ್ವೆಯಲ್ಲಿ ತಾಂತ್ರಿಕ ಸಹಾಯಕರ ಹುದ್ದೆ; ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

Job Alert: ಕೊಂಕಣ್​ ರೈಲ್ವೆಯಲ್ಲಿ ತಾಂತ್ರಿಕ ಸಹಾಯಕರ ಹುದ್ದೆ; ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಕೊಂಕಣ್​​ ರೈಲ್ವೆ ಕಾರ್ಪೊರೇಷನ್​ ಲಿಮಿಟೆಡ್​ನಲ್ಲಿ ಖಾಲಿ ಇರುವ 42 ತಾಂತ್ರಿಕ ಸಹಾಯಕ ಮತ್ತು ಸಹಾಯಕ ತಾಂತ್ರಿಕ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಡಿಪ್ಲೊಮ, ಬಿಇ, ಯಾವುದೇ ಪದವಿ ಪಾಸ್‌ ಮಾಡಿದವರಿಗೆ ಉದ್ಯೋಗ ಅವಕಾಶ ಇದ್ದು, ಆಸಕ್ತರು ಹುದ್ದೆಗಳ ಕುರಿತು ಕಂಪ್ಲೀಟ್‌ ವಿವರ, ಅರ್ಜಿ ವಿಧಾನವನ್ನು ಕೆಳಗಿನಂತೆ ತಿಳಿಯಿರಿ.

ವಿದ್ಯಾರ್ಹತೆ
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಎಲೆಕ್ಟ್ರಿಕಲ್​, ಎಲೆಕ್ಟ್ರಾನಿಕ್ಸ್​, ಮೆಕಾನಿಕಲ್​ ಇಂಜಿನಿಯರಿಂಗ್​ನಲ್ಲಿ ಡಿಪ್ಲೊಮಾ, ಐಟಿಐ ಪದವಿಯನ್ನು ಪಡೆದಿರಬೇಕು.

ವಯೋಮಿತಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 45 ವರ್ಷ ಆಗಿದೆ. ಒಬಿಸಿ ಅಭ್ಯರ್ಥಿಗಳಿಗೆ 3 ಮತ್ತು ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ. ಈ ಹುದ್ದೆಗೆ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.

ಆಯ್ಕೆ ವಿಧಾನ
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು, ಅವರ ವಿದ್ಯಾರ್ಹತೆಯ ಅಂಕಗಳ ಆಧಾರದಲ್ಲಿ ಮೆರಿಟ್ ಲಿಸ್ಟ್‌ ಸಿದ್ಧಪಡಿಸಿ, ಶಾರ್ಟ್‌ ಲಿಸ್ಟ್‌ ಮಾಡಿ ಆಯ್ಕೆ ಮಾಡಲಾಗುತ್ತದೆ.

ವಾಕ್​ ಇನ್​ ನಡೆಯುವ ದಿನ: ಜೂನ್​ 21ರಂದು ಈ ಹುದ್ದೆಗೆ ನೇರ ಸಂದರ್ಶನ ಈ ಕೆಳಗಿನ ವಿಳಾಸದಲ್ಲಿ ನಡೆಯಲಿದೆ.

ಎಕ್ಸಿಕ್ಯೂಟಿವ್​ ಕ್ಲಬ್​, ಕೊಂಕಣ್​ ರೈಲ್​ ವಿಹಾರ್, ಕೊಂಕಲ್​ ರೈಲ್​ ಕಾರ್ಪೊರೇಷನ್​ ಲಿಮಿಟೆಡ್​, ಸೀವುಡ್ಸ್​​ ರೈಲ್ವೆ ಸ್ಟೇಷನ್​, ಸೆಕ್ಟರ್​ 40, ಸೀವುಡ್ಸ್​​​, (ಪಶ್ಚಿಮ), ನವಿ ಮುಂಬೈ.

ಈ ಹುದ್ದೆ ಕುರಿತ ಹೆಚ್ಚಿನ ಮಾಹಿತಿಗೆ konkanrailway.com ಭೇಟಿ ನೀಡಿ.

ಹೆಚ್ಚಿನ ಸುದ್ದಿ