Sunday, July 7, 2024
Homeಟಾಪ್ ನ್ಯೂಸ್Rain Update: ರಾಜ್ಯಾದ್ಯಂತ ಭಾರೀ ಮಳೆ - ಹಲವೆಡೆ ರೆಡ್ ಅಲರ್ಟ್

Rain Update: ರಾಜ್ಯಾದ್ಯಂತ ಭಾರೀ ಮಳೆ – ಹಲವೆಡೆ ರೆಡ್ ಅಲರ್ಟ್

ಬೆಂಗಳೂರು: ಮುಂದಿನ ನಾಲ್ಕು ದಿನಗಳ ಕಾಲ ಕರ್ನಾಟಕದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಹಾವೇರಿ, ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ ಯೆಲ್ಲೋ ಅಲರ್ಟ್​ ಘೋಷಿಸಿದೆ.

ಸಾರ್ವಜನಿಕರು ಹಾಗೂ ಮೀನುಗಾರರು ನದಿ, ನೀರಿರುವ ಪ್ರದೇಶ ಮತ್ತು ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರವಹಿಸಬೇಕು. ಮಕ್ಕಳು ಸಾರ್ವಜನಿಕರು ವಿದ್ಯುತ್ ಕಂಬದ ಹತ್ತಿರವಿರಬಾರದು, ತುಂಡಾದ ವಿದ್ಯುತ್ ತಂತಿಗಳಿಂದ ದೂರ ಇರಬೇಕು ಎಂದು ಎಚ್ಚರಿಕೆ ನೀಡಲಾಗಿದೆ

ಈಗಾಗಲೇ ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ, ದಾವಣಗೆರೆ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರದಲ್ಲೂ ಮಳೆಯಾಗಲಿದೆ. ಕೊಲ್ಲೂರು, ಸಿದ್ದಾಪುರ, ಕೊಟ್ಟಿಗೆಹಾರ, ಕೋಟ, ಆಗುಂಬೆ, ಧರ್ಮಸ್ಥಳ, ಉಡುಪಿ, ಲಿಂಗನಮಕ್ಕಿಯಲ್ಲಿ ಹೆಚ್ಚು ಮಳೆಯಾಗಿದೆ.

ಭಾಗಮಂಡಲ, ಉಪ್ಪಿನಂಗಡಿ, ಕದ್ರಾ, ಸಿದ್ದಾಪುರ, ಮಂಗಳೂರು, ಶಿರಾಲಿ, ಕುಂದಾಪುರ, ಮಾಣಿ, ಕಾರ್ಕಳ, ನಾಪೊಕ್ಲು, ಪೊನ್ನಂಪೇಟೆ, ಗೇರುಸೊಪ್ಪ, ಬೆಳ್ತಂಗಡಿ, ಮಂಕಿ, ಪುತ್ತೂರು, ಕಿರವತ್ತಿ, ಯಲ್ಲಾಪುರ, ಕಮ್ಮರಡಿ, ಕಳಸ, ಹುಂಚದಕಟ್ಟೆ, ಕೊಪ್ಪ, ಶೃಂಗೇರಿ, ತಾಳಗುಪ್ಪ, ಮೂರ್ನಾಡು, ಗೋಕರ್ಣ, ಬನವಾಸಿ, ಅಂಕೋಲಾ, ಹೊನ್ನಾವರ, ಶಿಗ್ಗಾಂವ್, ಸವಣೂರು, ಜಯಪುರ, ಸೋಮವಾರಪೇಟೆ, ಗೌರಿಬಿದನೂರು, ಬಂಡೀಪುರ, ಅರಕಲಗೂಡು, ಕುಶಾಲನಗರ, ಕುಮಟಾ, ಮುಲ್ಕಿ, ಹಳಿಯಾಳ, ಹಿರೇಕೆರೂರು, ಸುಳ್ಯ, ಹಗರಿಬೊಮ್ಮನಹಳ್ಳಿ, ಹಾರಂಗಿ, ಕೊಟ್ಟೂರು, ಎನ್​ಆರ್​ಪುರ, ಚಿತ್ರದುರ್ಗ, ಮಾಗಡಿಯಲ್ಲಿ ಮಳೆಯಾಗಿದೆ.

ಹೆಚ್ಚಿನ ಸುದ್ದಿ