Sunday, July 7, 2024
Homeಟಾಪ್ ನ್ಯೂಸ್Actress Ramya : ಲವ್ವಲ್ಲಿ ಬಿದ್ರಾ ನಟಿ ರಮ್ಯಾ? ‘ಪದ್ಮಾವತಿ’ ಬಗ್ಗೆ ಗುಸು-ಗುಸು ಸುದ್ದಿ!

Actress Ramya : ಲವ್ವಲ್ಲಿ ಬಿದ್ರಾ ನಟಿ ರಮ್ಯಾ? ‘ಪದ್ಮಾವತಿ’ ಬಗ್ಗೆ ಗುಸು-ಗುಸು ಸುದ್ದಿ!

ಬೆಂಗಳೂರು : ಚಂದನವನದ ಕ್ವೀನ್ ನಟಿ/ ಮಾಜಿ ಸಂಸದೆ ರಮ್ಯಾ ಅವರು ಓರ್ವ ನಿರ್ಮಾಪಕನೊಂದಿಗೆ ಲವ್ವಲ್ಲಿ ಬಿದ್ದಿದ್ದು, ಸದ್ಯದಲ್ಲೇ ಅವರು ಮದುವೆಯ ಶುಭ ಸುದ್ದಿ ನೀಡಲಿದ್ದಾರೆ ಎಂಬ ಸುದ್ದಿಯೊಂದು ಸದ್ದು ಮಾಡುತ್ತಿದೆ.

41 ವರ್ಷ ಆಗುತ್ತಿದ್ದು, ತಮ್ಮ ನೆಚ್ಚಿನ ನಟಿ ರಮ್ಯಾ (ದಿವ್ಯಾ ಸ್ಪಂದನ) ಯಾವಾಗ ಮದುವೆ ಆಗುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಇದರ ನಡುವೆಯೇ ಹೀಗೊಂದು ಸುದ್ದಿ ಸದ್ದು ಮಾಡುತ್ತಿದೆ.

ಹೌದು, ರಮ್ಯಾ ಅವರು ಬೆಂಗಳೂರು ಮೂಲದ ಖ್ಯಾತ ನಿರ್ಮಾಕನೊಂದಿಗೆ ಲಿವಿಂಗ್ ರಿಲೇಷನ್ ಶಿಪ್ನಲ್ಲಿದ್ದಾರೆ ಎಂಬ ಗಾಸಿಪ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ರಮ್ಯಾ ಅವರು ಈ ಬಗ್ಗೆ ತಮ್ಮ ಇನ್ಸ್ಸ್ಟಾಗ್ರಾಂ ಮುಂತಾದ ಸೋಷಿಯಲ್ ಮೀಡಿಯಾಗಳ ಖಾತೆ ಯಾವುದರಲ್ಲೂ ಸ್ಪಷ್ಟನೆ ನೀಡಿಲ್ಲ. ಈ ಹಿಂದೆಯೂ ಅವರು ಪೋರ್ಚುಗಲ್ ಮೂಲದ ರಫೇಲ್ ಎಂಬ ಅವರ ಆಪ್ತ ಸ್ನೇಹಿತನೊಂದಿಗೆ ದುಬೈನಲ್ಲಿ ವಿವಾಹ ಆಗಲಿದ್ದಾರೆ ಎಂದೂ ಗುಲ್ ಹಬ್ಬಿದ್ದು ತೀರಾ ಹಳೆಯ ವಿಚಾರ.

ಹೆಚ್ಚಿನ ಸುದ್ದಿ