Sunday, July 7, 2024
Homeಟಾಪ್ ನ್ಯೂಸ್KALKI MOVIE: ಕೆಜಿಎಫ್ ದಾಖಲೆ ಮುರಿದ ಕಲ್ಕಿ - ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?

KALKI MOVIE: ಕೆಜಿಎಫ್ ದಾಖಲೆ ಮುರಿದ ಕಲ್ಕಿ – ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?

ನಿರ್ದೇಶಕ ನಾಗ್ ಅಶ್ವಿನ್ ಕಲ್ಪನೆಯಲ್ಲಿ ಮೂಡಿಬಂದ ಚಿತ್ರವೇ ‘ಕಲ್ಕಿ 2898 ಎಡಿ’. ಈಗಾಗಲೇ ಕಲ್ಕಿ ಸಿನಿಮಾ ಚಿತ್ರ ಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಸಿನಿಮಾದಲ್ಲಿ ದೊಡ್ಡ ತಾರಾ ಬಣವೇ ಇದ್ದು, ಅಮಿತಾಭ್ ಬಚ್ಚನ್, ಪ್ರಭಾಸ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಹೀಗೆ ಹಲವು ಸ್ಟಾರ್ ನಟರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಬರೋಬ್ಬರಿ 600ಕೋಟೆ ವೆಚ್ಚದಲ್ಲಿ ನಿರ್ಮಾಣ ಮತ್ತು ದೊಡ್ಡ ಸ್ಟಾರ್‌ ಗಳನ್ನು ಒಳಗೊಂಡ ಈ ಚಿತ್ರದ ಕುರಿತು ಪ್ರೇಕ್ಷಕರಲ್ಲಿ ಬಹಳ ನಿರೀಕ್ಷೆ ಹುಟ್ಟಿಕೊಂಡಿತ್ತು. ಈ ಸಿನಿಮಾ ಹೇಗಿರಬಹುದು? ಈ ಬಾರಿ ನಿರ್ದೇಶಕ ನಾಗ್ ಅಶ್ವಿನ್ ಹೊಸದಾಗಿ ಏನು ಹೇಳಲು ಹೊರಟಿದ್ದಾರೆ ಎಂಬ ಕುತೂಹಲವಂತೂ ಸಿನಿ ರಸಿಕರಲ್ಲಿ ಸದಾ ಕಾಡುತ್ತಿತ್ತು. ಅದಕ್ಕೀಗ ತೆರೆಬಿದ್ದಿದೆ.

ಕಲ್ಕಿ 2898 ಎಡಿ ಸಿನಿಮಾದ ಗಳಿಕೆ ದಾಖಲೆ ಬರೆದಿದೆ. ಪ್ರಭಾಸ್, ದೀಪಿಕಾ ಪಡುಕೋಣೆ ಸೇರಿ ಸ್ಟಾರ್ ಕಲಾವಿದರ ದಂಡೇ ಚಿತ್ರದಲ್ಲಿ ಇದೆ. ಇದರ ಜೊತೆಗೆ ಅನೇಕ ಸೆಲೆಬ್ರಿಟಿಗಳು ಅತಿಥಿ ಪಾತ್ರ ಮಾಡಿದ್ದಾರೆ. ಈ ಎಲ್ಲಾ ಕಾರಣದಿಂದ ಸಿನಿಮಾ ಮೊದಲ ದಿನ ಭರ್ಜರಿ ಗಳಿಕೆ ಮಾಡಿದೆ. ಆರಂಭದ ಲೆಕ್ಕಾಚಾರದ ಪ್ರಕಾರ ಮೊದಲ ದಿನ ಸುಮಾರು 180 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎನ್ನಲಾಗುತ್ತಿದೆ.

ಈ ಚಿತ್ರಕ್ಕೆ ಭಾರತದಲ್ಲಿ ಪಾಸಿಟಿವ್ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ, ಸಿನಿಮಾ ಭಾರತದಲ್ಲಿ 95 ಕೋಟಿ ರೂಪಾಯಿ ಬಾಚಿಕೊಂಡಿದೆ. ಮೂಲಗಳ ಪ್ರಕಾರ ಗ್ರಾಸ್ ಕಲೆಕ್ಷನ್ ಲೆಕ್ಕಾಚಾರ 115 ಕೋಟಿ ರೂಪಾಯಿ ಆಗುತ್ತದೆ. ವಿಶ್ವಾದ್ಯಂತದ ಲೆಕ್ಕಾಚಾರ ಹಾಕಿದರೆ ‘ಕಲ್ಕಿ 2898 ಎಡಿ’ ಚಿತ್ರ ಹಲವು ಚಿತ್ರಗಳ ದಾಖಲೆ ಮುರಿದಂತೆ ಆಗುತ್ತದೆ ಎಂದು ಹೇಳಲಾಗುತ್ತಿದೆ.

ಮೊದಲ ದಿನದ ಗಳಿಕೆಯಲ್ಲಿ ಕನ್ನಡದ ಕೆಜಿಎಫ್ 2, ಸಲಾರ್, ಲಿಯೋ, ಸಾಹೋ  ದಾಖಲೆಗಳನ್ನು ಈ ಚಿತ್ರ ಹಿಂದಿಕ್ಕಿದೆ. ಆದರೆ, ಮೊದಲ ದಿನದ ಗಳಿಕೆಯಲ್ಲಿ ಆರ್​ಆರ್​ಆರ್ ಹಾಗೂ ಬಾಹುಬಲಿ 2 ಚಿತ್ರವನ್ನು ಹಿಂದಿಕ್ಕಲು ಈ ಸಿನಿಮಾ ಬಳಿ ಸಾಧ್ಯವಾಗಿಲ್ಲ.

ಹೆಚ್ಚಿನ ಸುದ್ದಿ