Sunday, July 7, 2024
Homeಟಾಪ್ ನ್ಯೂಸ್KALKI 2898 AD: ಕಲ್ಕಿ ಕಮಾಲ್ : 4 ದಿನದಲ್ಲೇ 500 ಕೋಟಿ ಬಾಚಿದ ಸಿನಿಮಾ!

KALKI 2898 AD: ಕಲ್ಕಿ ಕಮಾಲ್ : 4 ದಿನದಲ್ಲೇ 500 ಕೋಟಿ ಬಾಚಿದ ಸಿನಿಮಾ!

ಮುಂಬೈ : ನಾಗ್ ಅಶ್ವಿನ್ ನಿರ್ದೇಶಿಸಿ, ಪ್ರಭಾಸ್ ನಟಿಸಿರುವ ಭಾರೀ ಬಜೆಟ್ ನ ಕಲ್ಕಿ 2898 ಎಡಿ ಚಿತ್ರ ಬಿಡುಗಡೆ ಆದ 4 ದಿನಗಳಲ್ಲಿ 500 ಕೋಟಿ ರೂ. ಬಾಚಿಕೊಳ್ಳುವ ಮೂಲಕ ಬಾಕ್ಸಾಫೀಸ್ ಹೊಸ ದಾಖಲೆ ಬರೆದಿದೆ.

ಜೂನ್ 27ರಂದು ಏಕಕಾಲದಲ್ಲಿ ಹಲವು ಭಾಷೆಗಳಲ್ಲಿ ಅಲ್ಲದೇ 2ಡಿ ಮತ್ತು 3ಡಿಗಳಲ್ಲೂ ಕಲ್ಕಿ ಚಿತ್ರ ಬಿಡುಗಡೆ ಮಾಡಲಾಗಿತ್ತು.

ಕಲ್ಕಿ ಚಿತ್ರ ಜಾಗತಿಕ ಮಟ್ಟದಲ್ಲಿ ಒಟ್ಟಾರೆ 4 ದಿನಗಳಲ್ಲಿ 500 ಕೋಟಿ ರೂ. ಗಳಿಸಿದ್ದು, ಭಾರತದಲ್ಲೇ 300 ಕೋಟಿ ರೂ. ಗಳಿಸಿ ಹೊಸ ದಾಖಲೆ ಬರೆದಿದೆ.

ಕಲ್ಕಿ ಚಿತ್ರದ ನಿರ್ಮಾಣ ಮಾಡಿದ ಸಂಸ್ಥೆ ವೈಜಯಂತಿ ಮೂವಿಸ್ ಎಕ್ಸ್ ನಲ್ಲಿ ಅಧಿಕೃತವಾಗಿ 500 ಗಳಿಕೆಯನ್ನು ಪ್ರಕಟಿಸಿದೆ.

ಉತ್ತರ ಅಮೆರಿಕದಲ್ಲಿ ಮೊದಲ ವಾರದಲ್ಲೇ 87 ಕೋಟಿ ರೂ. ಸಂಗ್ರಹಿಸುವ ಮೂಲಕ ಅತೀ ದೊಡ್ಡ ಹಿಟ್ ಚಿತ್ರದ ದಾಖಲೆ ಬರೆಯುವ ಮೂಲಕ ಕಲ್ಕಿ ಚಿತ್ರ ವಿದೇಶದಲ್ಲೂ ಅಬ್ಬರಿಸುತ್ತಿದೆ. ಚಿತ್ರಕ್ಕೆ ಎಲ್ಲಾ ಕಡೆಗಳಿಂದಲೂ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿರುವುದರಿಂದ ಚಿತ್ರ ಶೀಘ್ರದಲ್ಲೇ 800 ಕೋಟಿ ರೂ. ಗಳಿಸುವ ಸಾಧ್ಯತೆ ಇದೆ ಎಂದು ಸಿನಿಮಾ ಪಂಡಿತರು ವಿಶ್ಲೇಷಿಸಿದ್ದಾರೆ.

ಕಲ್ಕಿ ಚಿತ್ರದಲ್ಲಿ ಪ್ರಭಾಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ ಅಮಿತಾಭ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ದಿಶಾ ಪಠಾಣಿ ಮುಂತಾದವರು ನಟಿಸಿದ್ದಾರೆ. ವಿಜಯ್ ದೇವರಕೊಂಡ, ಎಸ್ ಎಸ್ ರಾಜಮೌಳಿ, ರಾಮ್ ಗೋಪಾಲ್ ವರ್ಮಾ ಮುಂತಾದವರು ಅತಿಥಿ ಪಾತ್ರದಲ್ಲಿ ಮಿಂಚಿದ್ದಾರೆ.

 

ಹೆಚ್ಚಿನ ಸುದ್ದಿ