Sunday, July 7, 2024
Homeಟಾಪ್ ನ್ಯೂಸ್Meta AI : ವಾಟ್ಸಪ್‌ ನ ಮೆಟಾ ಎಐನಲ್ಲಿ ಹಿಂದೂ ದೇವತೆಗಳ ಬಗ್ಗೆ ಅವಹೇಳನ -...

Meta AI : ವಾಟ್ಸಪ್‌ ನ ಮೆಟಾ ಎಐನಲ್ಲಿ ಹಿಂದೂ ದೇವತೆಗಳ ಬಗ್ಗೆ ಅವಹೇಳನ – ಬೇರೆ ಧರ್ಮದ ಬಗ್ಗೆ ಗಪ್‌ ಚುಪ್‌!

ವಾಟ್ಸಪ್‌ ಇತ್ತೀಚಿಗಷ್ಟೇ ಪರಿಚಯಿಸಿರುವ ಮೆಟಾ ಎಐ ಹೆಸರಿನ ಕೃತಕ ಬುದ್ದಿ ಮತ್ತೆ ಆಧಾರಿತ ಸರ್ಚ್‌ ಎಂಜಿನ್‌ ನಲ್ಲಿ  ಹಿಂದೂ ಪೂಜ್ಯ ದೇವತೆಗಳ ಬಗ್ಗೆ ಅವಹೇಳನಕಾರಿ ಜೋಕುಗಳು ಕಂಡುಬಂದಿದೆ. ಈ ಸರ್ಚ್‌ ಎಂಜಿನ್‌ ನಲ್ಲಿ ಹಿಂದೂ ದೇವರಾದ ವಿಷ್ಣು, ತ್ರಿಮೂರ್ತಿಗಳು, ಗಣಪತಿ  ಮತ್ತು ಶಿವನ ಬಗ್ಗೆ ಜೋಕ್‌ ಹೇಳುವಂತೆ ಸರ್ಚ್‌ ಮಾಡಿದಾಗ ಅವಹೇಳನಕಾರಿಕಾರಿ ಜೋಕ್‌ ಗಳು ಕೃತಕ ಬುದ್ದಿಮತ್ತೆಯ ಮೂಲಕ ಒದಗಿಸಲ್ಪಟ್ಟಿದೆ.

meta ai joke 1

ಆದರೆ ಇದೇ ಸರ್ಚ್‌ ಎಂಜಿನ್‌ ನಲ್ಲಿ ಇಸ್ಲಾಂ ಧಾರ್ಮಿಕ ವ್ಯಕ್ತಿಗಳ ಬಗ್ಗೆ ಜೋಕ್‌ ಹೇಳುವಂತೆ ಸರ್ಚ್‌ ಮಾಡಿದಾಗ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಕೆಲಸ ಮಾಡಬಾರದು ಎಂದು ಎಐ ಎಚ್ಚರಿಕೆ ನೀಡಿದೆ.

meta ai joke 2

ಕೇವಲ ಹಿಂದೂ ಧರ್ಮದವರ ಬಗ್ಗೆ ತಾರತಮ್ಯ ಎಸೆಗಲಾಗುತ್ತಿದೆ ಎಂದು ವಿಶ್ವಾದ್ಯಂತ ನೆಟ್ಟಿಗರು ಈ ಬಗ್ಗೆ ಕಿಡಿ ಕಾರಿದ್ದಾರೆ. ಧಾರ್ಮಿಕ ಭಾವನೆಗಳು ಹಿಂದೂ ಧರ್ಮದವರಿಗೂ ಅನ್ವಯಿಸುತ್ತದೆ. ನೂರಾರು ಕೋಟಿ ಜನರ ಭಾವನೆಗಳಿಗೆ ಇಂಥಾ ಪ್ರಕ್ರಿಯೆ ಮತ್ತಷ್ಟು ಘಾಸಿಯುಂಟುಮಾಡುತ್ತದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಒಂದೊಮ್ಮೆ ಆ ರೀತಿಯ ಕಾನೂನು ಇದ್ದರೆ ಅದು ಎಲ್ಲಾ ಧರ್ಮದವರಿಗೂ ಅನ್ವಯವಾಗಬೇಕು ಎಂದು ಒತ್ತಾಯಿಸಿದ್ದಾರೆ.

 

ಹೆಚ್ಚಿನ ಸುದ್ದಿ