Sunday, July 7, 2024
Homeಟಾಪ್ ನ್ಯೂಸ್Jio: ಅಯ್ಯೋ ಜಿಯೋ..! : ಸರ್ವರ್ ಡೌನು.. ಬಳಕೆದಾರರು ಹೈರಾಣು

Jio: ಅಯ್ಯೋ ಜಿಯೋ..! : ಸರ್ವರ್ ಡೌನು.. ಬಳಕೆದಾರರು ಹೈರಾಣು

ನವದೆಹಲಿ: ದೇಶಾದ್ಯಂತ  ಜಿಯೋ ಬಳಕೆದಾದರು ಇದು ಇಂಟರ್‌ನೆಟ್‌ ಬಳಸಲು ಪರದಾಡುವಂತಾಗಿದೆ.

ದೇಶಾದ್ಯಂತ ಹಲವೆಡೆ ಜಿಯೋ ನೆಟ್‌ವರ್ಕ್‌ ಸರ್ವರ್‌ ಡೌನ್‌ ಆಗಿದೆ. ಇದರಿಂದಾಗಿ ವಾಟ್ಸಾಪ್‌, ಇನ್ಸ್ಟಾಗ್ರಾಮ್‌, ಎಕ್ಸ್‌, ಸ್ನ್ಯಾಪ್‌ಚಾಟ್‌, ಯೂಟ್ಯೂಬ್‌ ಸೇರಿದಂತೆ ದೈನಂದಿನ ಬಳಕೆಯ ಅಪ್ಲಿಕೇಶನ್ ಅನ್ನು ಬಳಸಲಾಗದೆ ಜನರು ಹೈರಾಣಾಗಿದ್ದಾರೆ.

ಡೌನ್‌ಡೆಕ್ಟ್‌ ವರದಿಯ ಪ್ರಕಾರ 54% ಬಳಕೆದಾರರು ಮೊಬೈಲ್‌ ಇಂಟರ್‌ನೆಟ್‌ ಸಮಸ್ಯೆಗಳನ್ನು ಎದುರಿಸಿದರೆ, 38% ಜನರು ಜಿಯೋ ಫೈಬರ್‌ನೆಟ್ ಬಳಸುವಾಗ ಸಮಸ್ಯೆಗಳನ್ನು ಎದುರಿಸಿದ್ದಾರೆ ಹಾಗೂ 7% ಮಂದಿ ಮೊಬೈಲ್‌ ನೆಟ್‌ವರ್ಕ್‌ ಅಡೆತಡೆಗಳನ್ನು ಅನುಭವಿಸಿದ್ದಾರೆ. ಆದರೂ ಈ ಸಮಸ್ಯೆಗಳ ಬಗ್ಗೆ ಇನ್ನು ಕೂಡಾ ಜಿಯೋ ಕಂಪನಿ ಯಾವುದೇ ಪ್ರತಿಕ್ರಿಯೆಗಳನ್ನು ನೀಡಿಲ್ಲ.

ಕಳೆದ ಬಾರಿ ಏಪ್ರಿಲ್‌ನಲ್ಲೂ ಇದೇ ರೀತಿ ಜಿಯೋ ಸರ್ವರ್‌ ಸ್ಥಗಿತಗೊಂಡಿದ್ದು, ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ #JioDown ಎಂದು ಹ್ಯಾಶ್‌ಟ್ಯಾಗ್‌ ಬಳಸಿ ಟ್ರೋಲ್‌ ಮಾಡಿದ್ದರು.

ಹೆಚ್ಚಿನ ಸುದ್ದಿ