Sunday, July 7, 2024
Homeಲೈಫ್ ಸ್ಟೈಲ್Evening Snacks: ಮನೆಯಲ್ಲಿ ಹಲಸಿನಕಾಯಿ ಇದ್ಯಾ? ಹಾಗ್ರಿದೆ ಈಗಲೇ ಮಾಡಿ ಈ ಹಲಸಿನ ಕಬಾಬ್ ರೆಸಿಪಿ

Evening Snacks: ಮನೆಯಲ್ಲಿ ಹಲಸಿನಕಾಯಿ ಇದ್ಯಾ? ಹಾಗ್ರಿದೆ ಈಗಲೇ ಮಾಡಿ ಈ ಹಲಸಿನ ಕಬಾಬ್ ರೆಸಿಪಿ

ಸಾಮಾನ್ಯವಾಗಿ ನೀವು ಹಲಸಿನ ಚಿಪ್ಸ್ ತಿಂದಿರಬಹುದು, ಹಲಸಿನಿಂದ ಅನೇಕ ಖಾದ್ಯಗಳನ್ನು ತಯಾರಿಸಿರಬಹುದು. ಆದರೆ ಅನೇಕರಿಗೆ ಹಲಸಿನ ಕಬಾಬ್ ಮಾಡುವುದು ತಿಳಿದಿರಲಿಕ್ಕಿಲ್ಲ. ಹಾಗಾದರೆ ವೆಜ್ ಪ್ರಿಯರಿಗಾಗಿ ನಾವು ಇವತ್ತು ಹಲಸಿನ ಕಬಾಬ್ ಮಾಡುವ ವಿಧಾನವನ್ನು ಹೇಳಿಕೊಡುತ್ತೇವೆ. ನೀವು ಟ್ರೈ ಮಾಡಿ, ಟೇಸ್ಟ್ ಮಾಡಿ ನಮ್ಮೊಂದಿಗೆ ನಿಮ್ಮ ಅನುಭವವನ್ನು ಕಾಮೆಮಟ್ ಮಾಡುವ ಮೂಲಕ ಹಂಚಿಕೊಳ್ಳಿ.

ಬೇಕಾಗುವ ಪದಾರ್ಥಗಳು:

* ಹಲಸಿನ ಕಾಯಿ ಒಂದು

* ಕಾಶ್ಮೀರ ಚಿಲ್ಲಿ ಪೌಡರ್ ಎರಡು ಟೇಬಲ್ ಸ್ಪೂನ್

* ಗರಂ ಮಸಾಲ ಪುಡಿ ಅರ್ಧ ಟೇಬಲ್ ಸ್ಪೂನ್

* ಕರಿ ಮೆಣಸು ಪುಡಿ ಒಂದು ಟೇಬಲ್ ಸ್ಪೂನ್

*ಅರಿಶಿಣ ಕಾಲ್ ಟೇಬಲ್ ಸ್ಪೂನ್

* ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಒಂದು ಕಾಲ್ ಚಮಚ

* ಕಾರ್ನ್‌ ಫ್ಲೋರ್ ನಾಲ್ಕು ಟೇಬಲ್ ಸ್ಪೂನ್

*ಅಕ್ಕಿ ಹಿಟ್ಟು ಎರಡು ಟೇಬಲ್ ಸ್ಪೂನ್

*ಕರಿಬೇವು ಸೊಪ್ಪು

* ಎರಡು ಮೊಟ್ಟೆ ಬಿಳಿಭಾಗ

*ನಿಂಬೆ ಹಣ್ಣು ಒಂದು

* ಉಪ್ಪು

* ಎಣ್ಣೆ

ತಯಾರಿಸುವ ವಿಧಾನ:

* ಎಳೆಯದಾದ ಹಲಸಿನ ಕಾಯಿಯನ್ನು ತಂದು ಅದರ ಮೇಲಿನ ಸಿಪ್ಪೆ ಬಿಡಿಸಿಕೊಂಡು ಸಣ್ಣ ತುಂಡುಗಳಾಗಿ ಮಾಡಿಕೊಳ್ಳಿ. ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳುವಾಗ ಇದನ್ನು ನೀರಿನಲ್ಲಿ ಹಾಕಿ ಇಲ್ಲವಾದಲ್ಲಿ ತುಂಡುಗಳು ಬೇರೆ ಬಣ್ಣಕ್ಕೆ ತಿರುಗುತ್ತವೆ.

* ನಂತರ ಒಂದು ಪಾತ್ರೆಯಲ್ಲಿ ನೀರು ಹಾಕಿ ಹಲಸಿನ ತುಂಡುಗಳನ್ನು ಹಾಗೂ ಉಪ್ಪು ಜೊತೆಗೆ ಅರಿಶಿಣ ಹಾಕಿ ಕುದಿಸಿ.

* ಬಳಿಕ ಒಂದು ಪಾತ್ರೆಗೆ ಕಾಶ್ಮೀರ ಚಿಲ್ಲಿ ಪೌಡರ್, ಗರಂ ಮಸಾಲ ಪುಡಿ, ಕರಿ ಮೆಣಸು ಪುಡಿ, ಅರಿಶಿಣ, ಕಾರ್ನ್‌ ಫ್ಲೋರ್, ಅಕ್ಕಿ ಹಿಟ್ಟು, ಕರಿಬೇವು ಸೊಪ್ಪು, ಎರಡು ಮೊಟ್ಟೆ ಬಿಳಿಭಾಗ, ನಿಂಬೆ ಹಣ್ಣಿನ ರಸ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ.

* ಇದನ್ನು ಸ್ವಲ್ಪ ಸ್ವಲ್ಪ ನೀರು ಹಾಕಿ ಚೆನ್ನಾಗಿ ಗಂಟಾಗದಂತೆ ಕಲಿಸಿಕೊಳ್ಳಿ. ದೋಸೆ ಹಿಟ್ಟಿನ ಹದಕ್ಕೆ ಇದನ್ನು ಕಲಿಸಿಕೊಳ್ಳಿ.

 

* ಬಳಿಕ ಇದಕ್ಕೆ ಕಕುದಿಸಿ ಆರಿಸಿದ ಹಲಸಿನ ತುಂಡುಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅರ್ಧ ಗಂಟೆ ಬಿಟ್ಟುಬಿಡಿ.

* ಬಳಿಕ ಒಂದು ಬಾಣಲೆಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಲು ಬಿಡಿ, ಇದನ್ನು ಡೀಪ್ ಫ್ರೈ ಮಾಡಬೇಕು.

*ಎಣ್ಣೆ ಕಾದ ನಂತರ ಒಂದೊಂದೇ ತುಂಡುಗಳನ್ನು ಹಾಕಿ ಡೀಫ್ ಫ್ರೈ ಮಾಡಿ.

* ಒಂದೆ ತಟ್ಟೆಗೆ ತೆಗೆದು ಸರ್ವ್ ಮಾಡಿ. ಈಗ ಹಲಸಿನ ಸೀಸನ್ ಶುರುವಾಗುತ್ತಿರುವುದರಿಂದ ಹಲಸು ಕಾಯಿ ಸುಲಭವಾಗಿ ಸಿಗುತ್ತದೆ. ಮನೆಯಲ್ಲಿ ನೀವು ಕೂಡ ಟ್ರೈ ಮಾಡಿ. ನೀವೇನಾದ್ರೂ ಹಲಸಿನ ಹಣ್ಣಿನ ಪ್ರೀಯರಾಗಿದ್ದರೆ, ಇದನ್ನು ಇಷ್ಟಪಟ್ಟು ತಿನ್ನುತ್ತೀರಿ.

ಹೆಚ್ಚಿನ ಸುದ್ದಿ