Sunday, July 7, 2024
Homeಚುನಾವಣೆ 2023IT Raid : ಫೈಟರ್‌ ರವಿ ಮನೆಯ ಮೇಲೆ ಐಟಿ ದಾಳಿ

IT Raid : ಫೈಟರ್‌ ರವಿ ಮನೆಯ ಮೇಲೆ ಐಟಿ ದಾಳಿ

ಬೆಂಗಳೂರು : ಬಿಜೆಪಿ (BJP) ಟಿಕೆಟ್‌ ಆಕಾಂಕ್ಷಿಯಾಗಿ ಗುರುತಿಸಿಕೊಂಡಿದ್ದ ರೌಡಿ ಶೀಟರ್‌ (Rowdy sheeter) ಫೈಟರ್‌ ರವಿ (Fighter Ravi) ಮನೆಯ ಮೇಲೆ ಐಟಿ ಅಧಿಕಾರಿಗಳು ಶುಕ್ರವಾರ ದಾಳಿ (IT Raid) ನಡೆಸಿದ್ದಾರೆ. ವೈಯಾಳಿಕಾವಲ್‌ ನಲ್ಲಿರುವ ಫೈಟರ್‌ ರವಿ ಮನೆಯ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.

ಕಳೆದ ಬಾರಿ ನಾಗಮಂಗಲ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಫೈಟರ್‌ ರವಿ ಆಕಾಂಕ್ಷಿತನಾಗಿದ್ದ. ಆದರೆ ಮಾಜಿ ರೌಡಿ ಶೀಟರ್‌ ಎಂಬ ವಿವಾದದ ಹಿನ್ನೆಲಯಲ್ಲಿ ಟಿಕೆಟ್‌ ಕೈತಪ್ಪಿತ್ತು. ಬಳಿಕೆ ಬಿಜೆಪಿ ಗುಡ್‌ ಬೈ ಹೇಳಿದ್ದ ಫೈಟರ್‌ ರವಿ ಸ್ವತಂತ್ರ ಅಭ್ಯರ್ಥಿಯಾಗಿ ನಿಂತಿದ್ದ.

ಪ್ರಧಾನಿ ಮೋದಿ ಬೆಂಗಳೂರಿಗೆ ಬಂದಾಗಲೂ ಸಹ ಅವರೊಡನೆ ಫೋಟೋ ತೆಗೆಸಿಕೊಂಡಿದ್ದು ತೀವ್ರ ಟೀಕೆಗೆ ಗುರಿಯಾಗಿತ್ತು.

ಹೆಚ್ಚಿನ ಸುದ್ದಿ