Sunday, July 7, 2024
Homeಟಾಪ್ ನ್ಯೂಸ್JOB Alert: ಐಟಿಬಿಪಿಯಲ್ಲಿ ಉದ್ಯೋಗಾವಕಾಶ; ಹೆಡ್​ ಕಾನ್ಸ್​ಟೇಬಲ್ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

JOB Alert: ಐಟಿಬಿಪಿಯಲ್ಲಿ ಉದ್ಯೋಗಾವಕಾಶ; ಹೆಡ್​ ಕಾನ್ಸ್​ಟೇಬಲ್ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ಬೆಂಗಳೂರು: ಇಂಡೋ ಟಿಬೇಟಿಯನ್​ ಗಡಿ ಪೊಲೀಸ್​ ಪಡೆಯಲ್ಲಿ ಖಾಲಿ ಇರುವ 112 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಶಿಕ್ಷಣ ಮತ್ತು ಒತ್ತಡ ಸಮಾಲೋಚನೆ ಹುದ್ದೆಗಳು ಇವಾಗಿದ್ದು, ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆ: 112 ಹೆಡ್​ ಕಾನ್ಸ್​ಟೇಬಲ್​ (ಶಿಕ್ಷಣ ಮತ್ತು ಒತ್ತಡ ಸಮಾಲೋಚಕರು)

  • ಪುರುಷ: 96
  • ಮಹಿಳೆಯರು : 16

ವಿದ್ಯಾರ್ಹತೆ: ಅಭ್ಯರ್ಥಿಗಳು ಸೈಕಾಲಾಜಿಯಲ್ಲಿ ಪದವಿ ಅಥವಾ ಪದವಿ ಅಥವಾ ಶಿಕ್ಷಣದಲ್ಲಿ ಪದವಿಯನ್ನು ಹೊಂದಿರಬೇಕು.

ವಯೋಮಿತಿ: ಅಭ್ಯರ್ಥಿಗಳು ಕನಿಷ್ಠ 20, ಗರಿಷ್ಠ ವಯೋಮಿತಿ 25 ವರ್ಷ. ಐಟಿಬಿಪಿ ನಿಯಮದ ಅನುಸಾರ ಮೀಸಲಾತಿ ಸಡಿಲಿಕೆ ಮಾಡಲಾಗಿದೆ.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳಾ ಅಭ್ಯರ್ಥಿಗಳು ಮತ್ತು ನಿವೃತ್ತ ಸೇವಾಧಾರರಿಗೆ ಅರ್ಜಿ ಶುಲ್ಕ ವಿನಾಯಿತಿ ನೀಡಲಾಗಿದೆ. ಇತರೆ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕ ನಿಗದಿಸಲಾಗಿದೆ.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ದೈಹಿಕ ಸಾಮರ್ಥ್ಯ ಪರೀಕ್ಷೆ, ಲಿಖಿತ, ದಾಖಲಾತಿ ಪರಿಶೀಲನೆ, ವೈದ್ಯಕೀಯ ಪ್ರವೇಶಾತಿ, ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಈ ಹುದ್ದೆಗಳಿಗೆ ಅಭ್ಯರ್ಥಿಗಳು ಜುಲೈ 7ರಿಂದ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನ ಆಗಸ್ಟ್​ 5 ಆಗಿದೆ.

ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು recruitment.itbpolice.nic.in ಭೇಟಿ ನೀಡಿ.

ಹೆಚ್ಚಿನ ಸುದ್ದಿ