Sunday, July 7, 2024
Homeಟಾಪ್ ನ್ಯೂಸ್LEAKING TRAIN : ರೈಲುಗಳು ಲೀಕ್‌ : ಇದು ಹಳೆಯ ವಿಡಿಯೋ ಎಂದ ಸಚಿವಾಲಯ.!-VIDEO

LEAKING TRAIN : ರೈಲುಗಳು ಲೀಕ್‌ : ಇದು ಹಳೆಯ ವಿಡಿಯೋ ಎಂದ ಸಚಿವಾಲಯ.!-VIDEO

ಇತ್ತೀಚೆಗಷ್ಟೇ ವಂದೇ ಭಾರತ್ ರೈಲಿನಲ್ಲಿ ಮಳೆ ನೀರು ಸೋರಿಕೆಯಾಗುತ್ತಿರುವ ವಿಷಯ ಭಾರೀ ಚರ್ಚೆಗೆ ಕಾರಣವಾಗುತ್ತಿದ್ದಂತೆ ಇದೀಗ ಮತ್ತೊಂದು ರೈಲಿನಲ್ಲಿ ಇದೇ ರೀತಿ ರೈಲಿನಲ್ಲಿ ಧಾರಾಕಾರವಾಗಿ ನೀರು ಸೋರುತ್ತಿರುವ ವೀಡಿಯೋ ವೈರಲ್ ಆಗಿದೆ.

ಭಾರೀ ಮಳೆ ಹಿನ್ನೆಲೆಯಲ್ಲಿ ರೈಲು ಸೋರುತ್ತಿದ್ದರೂ ಪ್ರಯಾಣಿಕರು ಛತ್ರಿ ಹಿಡಿದು ವೀಡಿಯೋ ಮಾಡುತ್ತಾ ಮೋಜು ಮಾಡುತ್ತಿದ್ದು, ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶಂತನು ಎಂಬುವವರು ಎಕ್ಸ್ ನಲ್ಲಿ ಈ ವೀಡಿಯೋ ಪೋಸ್ಟ್ ಮಾಡಿದ್ದು, ಕೆಂಪು ಟೀ ಶರ್ಟ್ ಧರಿಸಿದ ವ್ಯಕ್ತಿ ರೈಲಿನಲ್ಲಿ ಮಧ್ಯದಲ್ಲಿ ಛತ್ರಿ ಹಿಡಿದು ನಿಂತಿದ್ದು, ರೈಲಿನ ಹಲವೆಡೆ ಸೋರುತ್ತಿದ್ದರೂ ಕೆಲವು ಮಹಿಳೆಯರು ಛತ್ರಿ ಹಿಡಿದುಕೊಂಡಿರುವುದನ್ನು ವೀಡಿಯೋ ಮಾಡುತ್ತಿದ್ದಾರೆ.

ಈ ವೀಡಿಯೊವನ್ನು ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರನ್ನು ಟ್ಯಾಗ್ ಮಾಡಲಾಗಿದ್ದು, ಭಾರತೀಯ ರೈಲುಗಳ ದುಸ್ಥಿತಿಯನ್ನು ಗಮನಕ್ಕೆ ತರಲಾಗಿದೆ. ಇದಕ್ಕುತ್ತರಿಸಿರುವ ರೈಲ್ವೇ ಸಚಿವಾಲಯ, ಇದೊಂದು ಹಳೆಯ ವಿಡಿಯೋ ಆಗಿದ್ದು ಸಮಸ್ಯೆಗಳನ್ನು ಸರಿಪಡಿಸಲಾಗಿದೆ ಎಂದಿದೆ.

ಹೆಚ್ಚಿನ ಸುದ್ದಿ