Sunday, July 7, 2024
Homeಟಾಪ್ ನ್ಯೂಸ್VIRAL NEWS: ಈ ದೇಶದಲ್ಲಿ ಕಾಗೆಗಳನ್ನು ಕೊಲ್ಲಲು ಸರ್ಕಾರದಿಂದ ಯೋಜನೆ!

VIRAL NEWS: ಈ ದೇಶದಲ್ಲಿ ಕಾಗೆಗಳನ್ನು ಕೊಲ್ಲಲು ಸರ್ಕಾರದಿಂದ ಯೋಜನೆ!

ಕೀನ್ಯಾ: ಭಾರತೀಯ ಮೂಲದ ಪಕ್ಷಿ ಪ್ರಭೇದಗಳಾದ ಕಾಗೆಯನ್ನು ( crows) ಡಿಸೆಂಬರ್ 31 ರೊಳಗೆ ಕೊಲ್ಲಲು ಕೀನ್ಯಾ (Kenya) ಸರ್ಕಾರವು ಯೋಜಿಸಿದೆ.

ಕಿನ್ಯಾದಲ್ಲಿ ಕಾಗೆಗಳು ಅತಿ ಹೆಚ್ಚು ಉಲ್ಬಣಗೊಂಡಿದ್ದು, ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯನ್ನು ಉಂಟು ಮಾಡುತ್ತಿವೆ. ಇದು ಸ್ಥಳೀಯ ಪಕ್ಷಿಗಳ ಜನಸಂಖ್ಯೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಈ ಕಾಗೆಗಳು ಪರಿಸರ ವ್ಯವಸ್ಥೆಯ ಭಾಗವಾಗಿಲ್ಲ ಎಂದು ಕೀನ್ಯಾ ವನ್ಯಜೀವಿ ಸೇವೆ (KWS) ಹೇಳಿದೆ.

ಕಾಗೆಗಳು ಅಳಿವಿನಂಚಿನಲ್ಲಿರುವ ಸ್ಥಳೀಯ ಪಕ್ಷಿ ಪ್ರಭೇದಗಳನ್ನು ಬೇಟೆಯಾಡುವ ಅಪಾಯವಾಗಿ ಮಾರ್ಪಟ್ಟಿವೆ. ಇದು ಕೀನ್ಯಾದ ಕರಾವಳಿಯಲ್ಲಿ ಸಣ್ಣ ಸ್ಥಳೀಯ ಪಕ್ಷಿಗಳ ಗೂಡುಗಳನ್ನು ನಾಶಪಡಿಸುವ ಮೂಲಕ ಅವುಗಳ ಮೊಟ್ಟೆಗಳು ಮತ್ತು ಮರಿಗಳನ್ನು ಬೇಟೆಯಾಡುತ್ತಿವೆ. ಇದರಿಂದಾಗಿ ಉಳಿದ ಪಕ್ಷಿಗಳು ಗಮನಾರ್ಹವಾಗಿ ಕಡಿಮೆಯಾಗಿದೆ. ಹೀಗಾಗಿ ಕಾಗೆಗಳನ್ನು ಹತ್ಯೆ ಮಾಡುವ ನಿರ್ಧಾರಕ್ಕೆ ಬಂದಿದ್ದೇವೆ ಎಂದು ತಿಳಿಸಿದೆ.

ಹೆಚ್ಚಿನ ಸುದ್ದಿ