Sunday, July 7, 2024
Homeಕ್ರೀಡೆICC T20 WORLD CUP : ಮಳೆಯಿಂದಾಗಿ ಭಾರತ - ಕೆನಡಾ ಪಂದ್ಯ ರದ್ದು..!

ICC T20 WORLD CUP : ಮಳೆಯಿಂದಾಗಿ ಭಾರತ – ಕೆನಡಾ ಪಂದ್ಯ ರದ್ದು..!

ಫ್ಲೋರಿಡಾದಲ್ಲಿ ನಡೆಯಬೇಕಿದ್ದ ಭಾರತ ಹಾಗೂ ಕೆನಡಾ ನಡುವಿನ ಔಪಚಾರಿಕ ಪಂದ್ಯ ಮಳೆಯಿಂದ ಮೈದಾನ ಒದ್ದೆಯಾಗಿದ್ದರಿಂದ ಒಂದೇ ಒಂದು ಚೆಂಡು ಕೂಡ ಎಸೆಯಲಾಗದೆ ರದ್ದಾಗಿದೆ.

ಫ್ಲೋರಿಡಾದ ಲಾಡರ್‌ಹಿಲ್‌ನ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್‌ನಲ್ಲಿ ಪಂದ್ಯಕ್ಕೂ ಮುನ್ನ ಫ್ಲೋರಿಡಾದಲ್ಲಿ ಮಳೆ ಸುರಿದ ಕಾರಣದಿಂದಾಗಿ ಮೈದಾನ ಒದ್ದೆಯಾಗಿತ್ತು. ಒದ್ದೆಯಾಗಿದ್ದ ಔಟ್‌ಫೀಲ್ಡ್‌ ಒಣಗಿಸಲು ಮೈದಾನದ ಸಿಬ್ಬಂದಿ ಹರಸಾಸಹಸ ಪಟ್ಟರು. 

ಭಾರತೀಯ ಕಾಲಮಾನದ ಪ್ರಕಾರ 8 ಗಂಟೆಗೆ ಪಂದ್ಯ ಆರಂಭವಾಗಬೇಕಿತ್ತು. ಆದರೆ 9 ಗಂಟೆಯಾದರೂ ಮೈದಾನ ಪೂರ್ತಿ ಒಣಗದ ಕಾರಣದಿಂದಾಗಿ ಅಂತಿಮವಾಗಿ ಅಂಫೈರ್‌ಗಳು ಪಂದ್ಯವನ್ನು ರದ್ದುಪಡಿಸಿದರು. ಟಾಸ್‌ ಪ್ರಕ್ರಿಯೆಯೂ ನಡೆಯದೆ ಅಭಿಮಾನಿಗಳು ನಿರಾಶೆ ಅನುಭವಿಸಬೇಕಾಯಿತು.

ಭಾರತ ತಂಡ ಈಗಾಗಲೇ ಎ ಗುಂಪಿನಿಂದ ಸೂಪರ್ 8 ಸುತ್ತಿಗೆ ಪ್ರವೇಶಿಸಿದ್ದು, ಈ ಪಂದ್ಯದ ರದ್ದತಿಯಿಂದ ತಂಡದ ಸ್ಥಾನದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

 

ಹೆಚ್ಚಿನ ಸುದ್ದಿ