Sunday, July 7, 2024
Homeಕ್ರೀಡೆT20 WORLD CUP : ಇಂದು ಇಂಡೋ - ಆಸೀಸ್ ವಾರ್ : ಹೆಡ್ ಟು...

T20 WORLD CUP : ಇಂದು ಇಂಡೋ – ಆಸೀಸ್ ವಾರ್ : ಹೆಡ್ ಟು ಹೆಡ್ ರೆಕಾರ್ಡ್ಸ್ 

ನವದೆಹಲಿ : ಟಿ20 ವಿಶ್ವಕಪ್‌ನ ಸೂಪರ್-8 ಸುತ್ತು ಕೂಡ ಕೊನೆಯ ಹಂತಕ್ಕೆ ತಲುಪಿದ್ದು, ಎಂದು ಭಾರತ ಹಾಗೂ ಆಸ್ಟ್ರೇಲಿಯಾ ಮುಖಾಮುಖಿಯಾಗಲಿದೆ.

ವೆಸ್ಟ್ ಇಂಡೀಸ್ ನ ಸೇಂಟ್ ಲೂಸಿಯಾದ ಡೇರೆನ್‌ ಸಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಉಭಯ ತಂಡಗಳ ನಡುವೆ ಹಣಾಹಣಿ ನಡೆಯಲಿದೆ. ಅಫ್ಘಾನಿಸ್ತಾನ ವಿರುದ್ಧದ ಸೋಲಿನ ಹಿನ್ನಲೆ ಆಸೀಸ್ ಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. 

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಿಗ್ ಫೈಟ್ ಮುನ್ನ ಉಭಯ ತಂಡಗಳ ಹೆಡ್ ಟು ಹೆಡ್ ರೆಕಾರ್ಡ್ಸ್ ನೋಡುವುದಾದರೆ, ಉಭಯ ತಂಡಗಳು ಒಟ್ಟು 31 ಪಂದ್ಯಗಳು ನಡೆದಿವೆ.

ಈ ಪೈಕಿ ಟೀಂ ಇಂಡಿಯಾ 19 ಪಂದ್ಯಗಳನ್ನು ಗೆದ್ದಿದ್ದರೆ, ಆಸ್ಟ್ರೇಲಿಯಾ ತಂಡ 11 ಪಂದ್ಯಗಳನ್ನು ಗೆದ್ದಿದೆ. ಆದರೆ ಒಂದು ಪಂದ್ಯದಲ್ಲಿ ಫಲಿತಾಂಶ ಬಂದಿಲ್ಲ.

ಇನ್ನು, ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಐದು ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಟೀಮ್ ಇಂಡಿಯಾ 3 ಬಾರಿ ಗೆದ್ದರೆ, ಆಸೀಸ್ 2 ಜಯ ದಾಖಲಿಸಿದೆ. 

ಒಟ್ಟಾರೆ ಅಂಕಿಅಂಶಗಳನ್ನು ನೋಡುವುದಾದರೆ ಆಸ್ಟ್ರೇಲಿಯಾಗಿಂತ ಭಾರತ ತಂಡವೇ ಹೆಚ್ಚು ಮೇಲುಗೈ ಸಾಧಿಸಿದೆ. ಆದರೆ ಇಂದು ಆಸೀಸ್ ಗೆ ಮಹತ್ವದ ಪಂದ್ಯವಾಗಿದ್ದು, ಇಂತಹ ಪಂದ್ಯದಲ್ಲಿ ಭರ್ಜರಿ ಆಟವಾಡುವ ತಂಡಗಳಲ್ಲಿ ಆಸೀಸ್ ಮುಂಚೂಣಿಯಲ್ಲಿದೆ. 

ಹೆಚ್ಚಿನ ಸುದ್ದಿ