Sunday, July 7, 2024
Homeಚುನಾವಣೆ 2023Election polls : ಮಧ್ಯಾಹ್ನ 3 ಗಂಟೆಯವರೆಗೆ ಶೇ. 47.5 ರಷ್ಟು ಮತದಾನ

Election polls : ಮಧ್ಯಾಹ್ನ 3 ಗಂಟೆಯವರೆಗೆ ಶೇ. 47.5 ರಷ್ಟು ಮತದಾನ

ನವದೆಹಲಿ : ಇಂದು 2024 ರ ಲೋಕಸಭಾ ಚುನಾವಣೆಯ 5 ನೇ ಹಂತದಲ್ಲಿ ಆರು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ 49 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.

ಇಸಿಐ ಪ್ರಕಾರ, ಮಧ್ಯಾಹ್ನ 3 ಗಂಟೆಯವರೆಗೆ 49 ಸ್ಥಾನಗಳಲ್ಲಿ 47.5 ಪ್ರತಿಶತದಷ್ಟು ಮತದಾನ ದಾಖಲಾಗಿದೆ, ಐದನೇ ಹಂತದಲ್ಲಿ ಪಶ್ಚಿಮ ಬಂಗಾಳದಲ್ಲಿ ಶೇ 62.7% ಗರಿಷ್ಠ ಮತದಾನವಾಗಿದ್ದರೆ, ಮಹಾರಾಷ್ಟ ಶೇ.33.8 ರಷ್ಟು ಕನಿಷ್ಠ ಮತದಾನವಾಗಿದೆ. ಇನ್ನು ಉಳಿದಂತೆ ಬಿಹಾರ: 45.33% , ಜಮ್ಮು ಮತ್ತು ಕಾಶ್ಮೀರ: 44.90%, ಜಾರ್ಖಂಡ: 53.90%, ಲಡಾಕ್: 61.26%, ಒಡಿಸ್ಸಾ: 48.95%, ಉತ್ತರಪ್ರದೇಶ: 47.55%, ಮತದಾನವಾಗಿದೆ.

5ನೇ ಹಂತದಲ್ಲಿ ಉತ್ತರ ಪ್ರದೇಶದ 14, ಮಹಾರಾಷ್ಟ್ರದ 13, ಪಶ್ಚಿಮ ಬಂಗಾಳದ 7, ಒಡಿಶಾದ 5, ಬಿಹಾರದ 5, ಜಾರ್ಖಂಡ್‌ನ 3, ಜಮ್ಮು ಮತ್ತು ಕಾಶ್ಮೀರದ ಒಂದು ಮತ್ತು ಲಡಾಖ್‌ನ ಒಂದು ಸ್ಥಾನಗಳಿಗೆ ಮತದಾನ ನಡೆಯುತ್ತಿದೆ.

ಹೆಚ್ಚಿನ ಸುದ್ದಿ