Sunday, July 7, 2024
Homeಕ್ರೀಡೆIND vs ENG: ಮಳೆಯಿಂದ ಸೆಮಿಫೈನಲ್‌ ರದ್ದಾದರೆ ಫೈನಲ್‌ಗೆ ಯಾವ ತಂಡ?

IND vs ENG: ಮಳೆಯಿಂದ ಸೆಮಿಫೈನಲ್‌ ರದ್ದಾದರೆ ಫೈನಲ್‌ಗೆ ಯಾವ ತಂಡ?

ಗಯಾನ: ಭಾರತ ತಂಡ 2024ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ಗೆ ಪ್ರವೇಶ ಮಾಡಿದೆ. ಜೂನ್‌ 27ರ ಗುರುವಾರ ಇಲ್ಲಿನ ಪ್ರಾವಿಡೆನ್ಸ್‌ ಸ್ಟೇಡಿಯಂನಲ್ಲಿ ಭಾರತ ಹಾಗೂ ಇಂಗ್ಲೆಂಡ್‌ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಸೆಣಸಲಿವೆ.

ವೆಸ್ಟ್‌ ಇಂಡೀಸ್‌ನ ಸ್ಥಳೀಯ ಹವಾಮಾನ ಇಲಾಖೆಯ ವರದಿಯ ಪ್ರಕಾರ ಭಾರತ ಹಾಗೂ ಇಂಗ್ಲೆಂಡ್ ನಡುವಣ ಎರಡನೇ ಸೆಮಿಫೈನಲ್‌ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾಗೆ ಮಳೆ ಭೀತಿ ಶುರುವಾಗಿದೆ. ಗಯಾನದಲ್ಲಿ ಶೇ. 88ರಷ್ಟು ಮಳೆಯಾಗುವ ಸಾಧ್ಯತೆ ಇದ್ದು ಎರಡನೇ ಸೆಮಿಫೈನಲ್‌ ಪಂದ್ಯ ನಡೆಯುವ ಬಗ್ಗೆ ಅನುಮಾನಗಳು ಪ್ರಾರಂಭವಾಗಿದೆ.

ಸೆಮಿಫೈನಲ್‌ಗೆ ಮೀಸಲು ದಿನ ಇದೆಯಾ?: ಜೂನ್‌ 27 ರಂದು ಭಾರತೀಯ ಕಾಲಮಾನ ರಾತ್ರಿ 08:00 ಗಂಟೆಗೆ ಭಾರತ ಹಾಗೂ ಇಂಗ್ಲೆಂಡ್‌ ಪಂದ್ಯ ನಡೆಯಲಿದೆ. ಅಂದ ಹಾಗೆ ಈ ಪಂದ್ಯಕ್ಕೆ ಮೀಸಲು ದಿನವನ್ನು ನಿಗದಿಪಡಿಸಿಲ್ಲ. ಒಂದು ವೇಳೆ ಮಳೆಯಿಂದ ಪಂದ್ಯ ಒಂದೂ ಎಸೆತ ಕಾಣದೆ ರದ್ದಾದರೆ, ರೋಹಿತ್ ಶರ್ಮಾ ಪಡೆ ಟಿ20 ವಿಶ್ವಕಪ್ ಟೂರ್ನಿಯ ಫೈನಲ್‌ಗೆ ಪ್ರವೇಶ ಮಾಡಲಿದೆ.

ಹೆಚ್ಚಿನ ಸುದ್ದಿ