Sunday, July 7, 2024
Homeಕ್ರೀಡೆIND vs AUS: ಆಸೀಸ್‌‌ ಪಡೆ ಬೆವರಿಳಿಸಿದ ಭಾರತ! ಸೆಮಿಸ್‌ಗೆ ಇಂಡಿಯಾ ಎಂಟ್ರಿ

IND vs AUS: ಆಸೀಸ್‌‌ ಪಡೆ ಬೆವರಿಳಿಸಿದ ಭಾರತ! ಸೆಮಿಸ್‌ಗೆ ಇಂಡಿಯಾ ಎಂಟ್ರಿ

T20 World Cup 2024: ಆಸ್ಟ್ರೇಲಿಯಾ ವಿರುದ್ಧ ನಡೆದ ಸೂಪರ್ 8ರ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದೆ. ಸೇಂಟ್ ಲೂಸಿಯಾದ ಗ್ರಾಸ್ ಐಲೆಟ್‌ನಲ್ಲಿರುವ ಡ್ಯಾರೆನ್ ಸಾಮಿ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆದಿದ್ದು ಸೆಮಿಫೈನಲ್​ಗೆ ಟೀಂ ಇಂಡಿಯಾ ಗ್ರ್ಯಾಂಡ್‌ ಎಂಟ್ರಿ ನೀಡಿದೆ.  

ಭಾರತ ನಿಗದಿತ 20 ಓವರ್‌ಗೆ 5 ವಿಕೆಟ್ ಗೆ 205 ರನ್‌ ಕಲೆ ಹಾಕಿತ್ತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 181 ರನ್ ಗಳಿಸುವ ಮೂಲಕ 24 ರನ್ ನಿಂದ ಸೋಲನ್ನಪ್ಪಿದೆ. ಮುಂದಿನ ಬಾಂಗ್ಲಾದೇಶ ಪಂದ್ಯದ ಮೇಲೆ ಆಸೀಸ್‌ ಭವಿಷ್ಯ ನಿಂತಿದೆ. ಇದೀಗ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ, ಇಂಗ್ಲೆಂಡ್​ ತಂಡವನ್ನು ಎದುರಿಸಲಿದೆ.

ರೊಚ್ಚಿಗೆದ್ದ ರೋಹಿತ್‌ ಶರ್ಮಾ: ವಿರಾಟ್‌ ಕೊಹ್ಲಿ ಔಟಾಗುತ್ತಿದ್ದಂತೆ ರೊಚ್ಚಿಗೆದ್ದ ರೋಹಿತ್ ಶರ್ಮಾ ಆಸೀಸ್‌ ವಿರುದ್ಧ ಅಬ್ಬರಿಸಿದ್ದಾರೆ. ಎರಡನೇ ಓವರ್‌ನಿಂದಲೇ ರೊಚ್ಚಿಗೆದ್ದ ಹಿಟ್‌ಮ್ಯಾನ್‌ ದೊಡ್ಡ ಹೊಡೆತಗಳನ್ನೇ ಬಾರಿಸಿ ಮೂರನೇ ಓವರ್‌ನಲ್ಲಿಯೇ ಭರ್ಜರಿ 29 ರನ್‌ ಗಳಿಸಿದ್ರು. ಇನ್ನೂ 92 ರನ್‌‌ಗಳಿಸಿ ರೋಹಿತ್‌ ಶರ್ಮಾ ಔಟಾದ್ರು. ಜಸ್ಟ್‌ 8 ರನ್‌‌ಗಳಿಂದ ವಿಶ್ವದಾಖಲೆ ಮಿಸ್ ಮಾಡಿಕೊಂಡಿದ್ದಾರೆ.  41 ಬಾಲ್‌ಗಳಲ್ಲಿ 92 ರನ್‌ ಗಳಿಸಿ ಔಟಾಗಿದ್ದಾರೆ.

 

ಹೆಚ್ಚಿನ ಸುದ್ದಿ