Sunday, July 7, 2024
Homeಟಾಪ್ ನ್ಯೂಸ್Robot Suicide: ಇದೆಂಥಾ ವಿಚಿತ್ರ; ಮೆಟ್ಟಿಲುಗಳಿಂದ ಬಿದ್ದು ರೋಬೋಟ್‌ ಆತ್ಮಹತ್ಯೆ!

Robot Suicide: ಇದೆಂಥಾ ವಿಚಿತ್ರ; ಮೆಟ್ಟಿಲುಗಳಿಂದ ಬಿದ್ದು ರೋಬೋಟ್‌ ಆತ್ಮಹತ್ಯೆ!

ಸಿಯೋಲ್:‌ ದಕ್ಷಿಣ ಕೊರಿಯಾದ ಪುರಸಭೆಯಲ್ಲಿ ಕೆಲಸ ಮಾಡುತ್ತಿದ್ದ ಮಾನವ ನಿರ್ಮಿತ ರೋಬೋಟ್‌ ಒಂದು ಮೆಟ್ಟಿಲುಗಳಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವಂತಹ ವಿಚಿತ್ರ ಘಟನೆ ನಡೆದಿದೆ.

ವರದಿಗಳ ಪ್ರಕಾರ ರೋಬೋಟ್ ಎರಡು ಮೀಟರ್ ಮೆಟ್ಟಿಲುಗಳ ಕೆಳಗೆ ಬಿದ್ದು ಬಳಿಕ ಅದು ನಿಷ್ಕ್ರಿಯವಾಗಿದೆ ಎಂದು ಗುಮಿ ಸಿಟಿ ಕೌನ್ಸಿಲ್ ಹೇಳಿದೆ. ಕಟ್ಟಡದ ಮೊದಲ ಮತ್ತು ಎರಡನೇ ಮಹಡಿಗಳ ನಡುವಿನ ಮೆಟ್ಟಿಲುಗಳ ಸಾಲುಗಳಲ್ಲಿ ರೋಬೋಟ್‌ನ ಭಾಗಗಳು ಬಿದ್ದಿರುವುದು ಕಂಡುಬಂದಿದೆ. ಇದು ವಿಶ್ವದಲ್ಲೇ ರೋಬೋಟ್‌ ಒಂದು ಆತ್ಮಹತ್ಯೆ ಮಾಡಿಕೊಂಡಿರುವ ಮೊದಲ ಘಟನೆಯಾಗಿದೆ.

ರೋಬೋಟ್‌ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ದಕ್ಷಿಣ ಕೊರಿಯಾದ ನಗರದ ನಿವಾಸಿಗಳು ಶೋಕ ವ್ಯಕ್ತಪಡಿಸಿದ್ದಾರೆ. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ರೋಬೋಟ್ ಒಂದು ಸ್ಥಳದಲ್ಲಿ ಏನೋ ಇದ್ದಂತೆ ತಿರುಗುತ್ತಿತ್ತು. ಬಳಿಕ ಇದ್ದಕ್ಕಿದ್ದಂತೆ ಬಿದ್ದಿದೆ ಎಂದಿದ್ದಾರೆ.

ಆದರೆ ಘಟನೆಗೆ ನಿಖರವಾದ ಕಾರಣವನ್ನು ತಿಳಿಯಲು ತನಿಖೆ ಮಾಡಲಾಗುತ್ತಿದೆ. ರೋಬೋಟ್‌ನ ಭಾಗಗಳನ್ನು ಸಂಗ್ರಹಿಸಲಾಗಿದೆ ಮತ್ತು ಕಂಪನಿಯು ವಿಶ್ಲೇಷಿಸುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ.

ಹೆಚ್ಚಿನ ಸುದ್ದಿ