Sunday, July 7, 2024
Homeಲೈಫ್ ಸ್ಟೈಲ್Morning Breakfast: ಸಖತ್‌ ಟೇಸ್ಟಿ, ಡಿಫ್ರೆಂಟ್‌ ರುಚಿಯ ಈ ಮ್ಯಾಂಗೋ ದೋಸೆ; ಇಲ್ಲಿದೆ ರೆಸಿಪಿ

Morning Breakfast: ಸಖತ್‌ ಟೇಸ್ಟಿ, ಡಿಫ್ರೆಂಟ್‌ ರುಚಿಯ ಈ ಮ್ಯಾಂಗೋ ದೋಸೆ; ಇಲ್ಲಿದೆ ರೆಸಿಪಿ

ಸದ್ಯ ಮಾರುಕಟ್ಟೆಯಲ್ಲಿ ಕಾಲಿಟ್ಟರೇ ಮಾವಿನ ಪರಿಮಳ ನಿಮ್ಮನ್ನು ಸೆಳೆಯುತ್ತದೆ. ಮಾರುಕಟ್ಟೆಯಲ್ಲಿ ಬಗೆ ಬಗೆಯ ಮಾವಿನ ಹಣ್ಣುಗಳು ಸಿಗುತ್ತಿವೆ. ಇನ್ನು ಮನೆಗಳಲ್ಲಿ ಮಾವಿನ ಹಣ್ಣಿನ ರೆಸಿಪಿಗಳು  ರಾರಾಜಿಸುತ್ತಿವೆ.

ಸಾಮಾನ್ಯವಾಗಿ ಮಾವು ಬಳಸಿ ವಿವಿಧ ರೀತಿಯ ಸಿಹಿ ಅಡುಗೆಗಳನ್ನು ಮಾಡುತ್ತಾರೆ. ಸಿಹಿಯಾದ ಮಾವಿನ ಹಣ್ಣಿನ ಐಸ್​ಕ್ರೀಂಗಳು ಹೆಚ್ಚು ಬೇಡಿಕೆ ಹೊಂದಿವೆ. ಮಲೆನಾಡು, ಕರಾವಳಿ ಭಾಗದಲ್ಲಿ ಮಾವು ಬಳಸಿ ವಿಶಿಷ್ಟವಾಗಿ ಅಡುಗೆ ಮಾಡುತ್ತಾರೆ.

ಇನ್ನೂ ಜ್ಯೂಸ್​ಗಳಂತೂ ಫ್ರಿಡ್ಜ್​ಗಳಲ್ಲಿ ತಮ್ಮ ಸ್ಥಾನವನ್ನು ಖಾತ್ರಿ ಮಾಡಿಕೊಂಡಿರುತ್ತವೆ. ಆದ್ರೆ ಇಂದು ನಾವು ನಿಮಗೆ ಮಾವಿನ ಹಣ್ಣಿನ ​ ದೋಸೆ  ಮಾಡುವ ವಿಧಾನವನ್ನು ಹೇಳುತ್ತಿದ್ದೇವೆ. ಮಾವು ಪ್ರಿಯರಿಗೆ ಈ ದೋಸೆ ಖಂಡಿತ ಇಷ್ಟವಾಗುತ್ತದೆ.

ಬೇಕಾಗುವ ಸಾಮಗ್ರಿಗಳು 

ಮಾವಿನ ಹಣ್ಣು: ದೊಡ್ಡ ಗಾತ್ರದ್ದು ಒಂದು

ದೋಸೆ ಹಿಟ್ಟು

ಗೋಡಂಬಿ: 4 ರಿಂದ 5

ಒಣದ್ರಾಕ್ಷಿ: 2 ರಿಂದ 3

ಬಾದಾಮಿ: 2 ರಿಂದ 3

ಏಲಕ್ಕಿ: ಒಂದು

ಸಕ್ಕರೆ ಪುಡಿ: ಒಂದು ಟೀ ಸ್ಪೂನ್

ತುಪ್ಪ

ಉಪ್ಪು

ಮಾಡುವ ವಿಧಾನ

*ಮೊದಲಿಗೆ ದೋಸೆ ಹಿಟ್ಟನ್ನು ಸಿದ್ಧಪಡಿಸಿಕೊಳ್ಳಿ. ಮ್ಯಾಂಗೋ ದೋಸೆಗಾಗಿ ಪ್ರತ್ಯೇಕವಾಗಿ ಹಿಟ್ಟು ಮಾಡಿಕೊಳ್ಳುವ ಅಗತ್ಯವಿಲ್ಲ.

*ಬಳಿಕ ಮಾವಿನ ಹಣ್ಣನ್ನು ಸ್ವಚ್ಛವಾಗಿ ತೊಳೆದುಕೊಂಡು ಇಡೀ ರಸವನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ. ಮಾವಿನ ಹಣ್ಣಿನ ರಸವನ್ನು ಬೇಕಾದ್ರೆ ಮಿಕ್ಸಿ ಜಾರ್​ಗೆ ರುಬ್ಬಿಕೊಳ್ಳಬಹುದು. ಆದರೆ ಮಾವಿನ ರಸ ಮಾಡುವಾಗ ನೀರು ಸೇರಿಸಬಾರದು.

*ಈ ಮಾವಿನ ಹಣ್ಣಿನ ರಸಕ್ಕೆ ಚಿಟಿಕೆ ಉಪ್ಪು, ಒಂದು ಟೀ ಸ್ಪೂನ್ ಸಕ್ಕರೆ ಮತ್ತು ಅರ್ಧ ಟೀ ಸ್ಪೂನ್ ಏಲಕ್ಕಿ ಪೌಡರ್ ಸೇರಿಸಿಕೊಂಡು ಚೆನ್ನಾಗಿ ಕಲಸಿ ಎತ್ತಿಟ್ಟುಕೊಳ್ಳಿ.

*ಈಗ ತೆಗೆದುಕೊಂಡಿರುವ ಗೋಡಂಬಿ, ಒಣದ್ರಾಕ್ಷಿ, ಬಾದಾಮಿಯನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ. ತದನಂತರ ಚಿಕ್ಕ ಪಾತ್ರೆಯೊಂದನ್ನು ಒಲೆ ಮೇಲೆ ಇರಿಸಿಕೊಳ್ಳಿ. ಕಡಿಮೆ ಉರಿಯಲ್ಲಿ ಒಂದು ಟೀ ಸ್ಪೂನ್ ತುಪ್ಪ ಹಾಕಿ ಕತ್ತರಿಸಿಕೊಂಡಿರುವ ಡ್ರೈ ಫ್ರೂಟ್ಸ್ ಸೇರಿಸಿ ಫ್ರೈ ಮಾಡಿಕೊಂಡು ಎತ್ತಿಟ್ಟುಕೊಳ್ಳಿ.

*ತದನಂತರ ಒಲೆ ಆನ್ ಮಾಡ್ಕೊಂಡು ಕಾವಲಿಯನ್ನು ಇರಿಸಿಕೊಳ್ಳಿ. ಕಾವಲಿ ಬಿಸಿ ಆಗುತ್ತಿದ್ದಂತೆ ತುಪ್ಪ ಸವರಿ ದಪ್ಪವಾಗಿ ಹಿಟ್ಟು ಹಾಕಬೇಕು. ಸಾಮಾನ್ಯ ದೋಸೆಯಂತೆ ಹಿಟ್ಟನ್ನು ಹಾಕಿ.

*ಎರಡು ನಿಮಿಷದ ಬಳಿಕ ದೋಸೆ ಮೇಲೆ ಸಿದ್ಧಮಾಡಿಕೊಂಡಿರುವ ಮಾವಿನ ಹಣ್ಣಿನ ರಸವನ್ನು ಹಾಕಿ ಸುತ್ತಲೂ ಸವರಿ ಮೇಲೆ ಫ್ರೈ ಮಾಡಿಕೊಂಡಿರುವ ಡ್ರೈ ಫ್ರೂಟ್ಸ್ ಹಾಕಿ ಮೇಲೆ ಎರಡು ಟೀ ಸ್ಪೂನ್ ತುಪ್ಪ ಹಾಕಿ ಮುಚ್ಚಳ ಮುಚ್ಚಿ ಕಡಿಮೆ ಉರಿಯಲ್ಲಿ ಎರಡು ನಿಮಿಷ ಬೇಯಿಸಿ.

ಹೆಚ್ಚಿನ ಸುದ್ದಿ