Sunday, July 7, 2024
Homeಕ್ರೀಡೆICC RANKING : ಐಸಿಸಿ ಶ್ರೇಯಾಂಕ ಪ್ರಕಟ : ಅಗ್ರಸ್ಥಾನಕ್ಕೇರಿದ ಹಾರ್ದಿಕ್ ಪಾಂಡ್ಯ

ICC RANKING : ಐಸಿಸಿ ಶ್ರೇಯಾಂಕ ಪ್ರಕಟ : ಅಗ್ರಸ್ಥಾನಕ್ಕೇರಿದ ಹಾರ್ದಿಕ್ ಪಾಂಡ್ಯ

ನವದೆಹಲಿ: ಟಿ-20 ವಿಶ್ವಕಪ್ ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಟೀಮ್ ಇಂಡಿಯಾದ ಅಲ್ ರೌಂಡರ್ ಹಾರ್ದಿಕ್ ಪಾಂಡ್ಯ ಐಸಿಸಿ ಟಿ20 ಆಲ್ ರೌಂಡರ್ ಶ್ರೇಯಾಂಕದಲ್ಲಿ ನಂ.1 ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ನಲ್ಲಿ ನಡೆದ ವಿಶ್ವ ಕಪ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಆಡಿದ ಎಂಟು ಪಂದ್ಯದಲ್ಲಿ ಒಟ್ಟು 11 ವಿಕೆಟ್ ಪಡೆದುಕೊಂಡಿದ್ದು, 8 ಪಂದ್ಯಗಳಲ್ಲಿ ಅವರು ಆರು ಇನ್ನಿಂಗ್ಸ್‌ಗಳಲ್ಲಿ 151.57 ಸ್ಟೈಕ್ ರೇಟ್‌ನಲ್ಲಿ 144 ರನ್ ಗಳಿಸಿದ್ದರು.

ಈ ಮೂಲಕ ಹಾರ್ದಿಕ್ ಶ್ರೀಲಂಕಾದ ವನಿಂದು ಹಸರಂಗ ಅವರೊಂದಿಗೆ ಪಾಂಡ್ಯ 222 ರೇಟಿಂಗ್ ಅಂಕದೊಂದಿಗೆ ಜಂಟಿ ಅಗ್ರಸ್ಥಾನವನ್ನು ಪಡೆದುಕೊಂಡಿದ್ದಾರೆ. 

ಇನ್ನು ಬ್ಯಾಟಿಂಗ್ ಶ್ರೇಯಾಂಕದಲ್ಲಿ ಟ್ರಾವಿಸ್ ಹೆಡ್ ಟಾಪ್ 1 ನಲ್ಲಿದ್ದರೆ, ಸೂರ್ಯಕುಮಾರ್ ನಂ-2 ನಲ್ಲೇ ಮುಂದುವರೆದಿದ್ದಾರೆ. ಬೌಲಿಂಗ್ ವಿಭಾಗದಲ್ಲಿ  ಇಂಗ್ಲೆಂಡ್ ನ ಆದಿಲ್ ರಶೀದ್ 675 ರೇಟಿಂಗ್ ಅಂಕಗಳೊಂದಿಗೆ ನಂ.1 ಸ್ಥಾನದಲ್ಲಿದ್ದಾರೆ.

ಹೆಚ್ಚಿನ ಸುದ್ದಿ